ಬಿಜೆಪಿ ಪ್ರಾಯೋಜಿತ ಗುಂಪಿನಿಂದ ಗ್ರಾಮ ವಾಸ್ತವ್ಯಕ್ಕೆ ಅಡ್ಡಿ: ಸಿಎಂ

BJP sponsored gangs can

27-06-2019

ಬೆಂಗಳೂರು: ಬಿಜೆಪಿ ಪ್ರಾಯೋಜಿತ  ಗುಂಪುಗಳು  ನನ್ನ  ಗ್ರಾಮ  ವಾಸ್ತವ್ಯ  ಸಂದರ್ಭದಲ್ಲಿ  ಅಡ್ಡಿಯುಂಟುಮಾಡುವ ಪ್ರಯತ್ನ ನಿರಂತವಾಗಿ ಮಾಡುತ್ತಿವೆ ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಿನ್ನೆ ರಾಯಚೂರಿನಲ್ಲಿ ಜನರೊಂದಿಗೆ ನಡೆದ ಮಾತಿನ ಚಕಮಕಿ ಮತ್ತು ಮಾಧ್ಯಮಗಳಲ್ಲಿ ಈ ಕುರಿತು ವ್ಯಾಪಕ ವರದಿ ಪ್ರಸಾರವಾದ ನಂತರ ಟ್ವೀಟ್ ಮಾಡಿರುವ ಅವರು, ಇಂತಹ  ಪ್ರಯತ್ನಗಳಿಂದ  ನನ್ನ ಸ್ಥೈರ್ಯ ಕುಂದದು. 

ಜನರೊಂದಿಗೆ  ಬೆರೆಯುವ, ಅರಿತುಕೊಳ್ಳುವ, ಸ್ಪಂದಿಸುವ ನನ್ನ ಕಾಯಕ ಹೀಗೆಮುಂದುವರಿಯುತ್ತದೆ ಎಂದಿದ್ದಾರೆ. ನಿನ್ನೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದ ಕೆಲವರು ಎಚ್‍ಡಿಕೆ ತೆರಳುತ್ತಿದ್ದ ಬಸ್ ಅನ್ನು ನಿಲ್ಲಿಸಿದ್ದರು. ಇದರಿಂದ ಕೋಪಗೊಂಡಿದ್ದ ಕುಮಾರಸ್ವಾಮಿ, ವೋಟ್ ಮೋದಿಗೆ ಹಾಕ್ತೀರಾ. ಕೆಲಸಕ್ಕೆ ನಾವಾ? ನಿಮ್ಮ ಮೇಲೆ ಲಾಠಿ ಚಾರ್ಜ್ ಮಾಡಬೇಕಾ? ಎಂದು ಕೆಂಡಾಮಂಡಲರಾಗಿ ಪ್ರತಿಕ್ರಿಯಿಸಿದ್ದರು.


ಸಂಬಂಧಿತ ಟ್ಯಾಗ್ಗಳು

CM Kumaraswamy JDS BJP Grama Vastavya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ