ಹೆಚ್ಚಿನ ತೆರಿಗೆ ತೆರವುಗೊಳಿಸಿ :ಡೊನಾಲ್ಡ್ ಟ್ರಂಪ್

withdraw higher taxes on america: Donald Trump

27-06-2019

ವಾಷಿಂಗ್ಟನ್: ಇತ್ತೀಚೆಗೆ ಭಾರತ ಅಮೆರಿಕದ ಮೇಲೆ ವಿಧಿಸಿರುವ ಹೆಚ್ಚಿನ ತೆರಿಗೆಯನ್ನು ಹಿಂಪಡೆಯಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆಗೆ ನಾನು ಉತ್ಸುಕನಾಗಿದ್ದೇನೆ. ಅನೇಕ ವರ್ಷಗಳಿಂದ ಅಮೆರಿಕದ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಲಾಗುತ್ತಿದೆ. ಇತ್ತೀಚೆಗೆ ತೆರಿಗೆಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಸುಂಕ ಏರಿಕೆಯನ್ನು ಹಿಂತೆಗೆದುಕೊ‍ಳ್ಳಬೇಕು ಎಂದು ಅವರು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Donald J Trump Narendra Modi Taxes India America


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ