ರಾಜ್ಯದಲ್ಲಿ ಆ್ಯಂಟಿರೇಬಿಸ್ ಚುಚ್ಚುಮದ್ದು ಕೊರತೆ

shortage of anti rabies medicine in Karnataka

26-06-2019

ಬೆಂಗಳೂರು: ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಆ್ಯಂಟಿರೇಬಿಸ್ಚುಚ್ಚುಮದ್ದು ಕೊರತೆ ಉಂಟಾಗಿದ್ದು ನೆರೆಯ ರಾಜ್ಯಗಳಿಂದ ರೇಬಿಸ್ ಮದ್ದು ಖರೀದಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ.

ನೆರೆಯ ತೆಲಂಗಾಣ, ತಮಿಳು ನಾಡು, ಕೇರಳ ರಾಜ್ಯಗಳಿಗೆ ಪತ್ರ ಬರೆದು ಲಭ್ಯವಿರುವ ಆಂಟಿರೇಬಿಸ್ ಮತ್ತು ಇಮಿನೊಗ್ಲೋಬಲಿನ್ ಔಷಧಗಳನ್ನು ನೀಡುವಂತ ಮಾಡಲಾಗಿದೆ ಪತ್ರಕ್ಕೆ ಸ್ಪಂದಿಸಿರುವ ಕೇರಳ ರಾಜ್ಯಸರ್ಕಾರ ಔಷಧ ಸರಬರಾಜು ಸಂಸ್ಥೆ 10 ಸಾವಿರ ರೇಬಿಸ್ ಮತ್ತು 2 ಸಾವಿರ ಇಮಿನೊಗ್ಲೋಬಲಿನ್ ಔಷಧಗಳನ್ನು ನೀಡಲು ಸಮ್ಮತಿಸಿದೆ.

ತಮಿಳುನಾಡು ಅಧಿಕಾರಿಗಳೊಂದಿಗೆ ಈ ಸಂಬಂಧ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿರುವ ಆಯುಕ್ತರು ದೇಶದಾದ್ಯಂತ ಆಂಟಿರೇಬಿಸ್ ಲಸಿಕೆ ಉತ್ಪಾದನೆ ಕೊರತೆಯುಂಟಾಗಿದೆ.ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ರಾಜ್ಯದಲ್ಲಿ ಉಂಟಾಗಿರುವ ಔಷಧಿಗಳ ಕೊರತೆಯುಂಟಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Anti rabies Medicine shortage Rabies Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ