ಪ್ರತಿಭಟನಾಕಾರರಿಗೆ ಲಾಠಿಚಾರ್ಜ್ ಬೇಕಾ? ಎಂದ ಸಿಎಂ

People strike against CM Kumaraswamy

26-06-2019

ರಾಯಚೂರು: ರಾಯಚೂರಿನ ಎರಮರಸ್‍ ಬಳಿ ಇರುವ ಕಲ್ಲಿದ್ದಲು ವಿದ್ಯುತ್ ಘಟಕದ ನೌಕರರು ಕೂಲಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಿದರು. ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್‍ ಅನ್ನು ತಡೆದ ಪ್ರತಿಭಟನಾಕಾರರು ‘ಶೇಮ್, ಶೇಮ್’ ಮತ್ತು ‘ಧಿಕ್ಕಾರ’ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅವರು ಕರೇಗುಡ್ಡಕ್ಕೆ ತೆರಳುತ್ತಿದ್ದರು. ಪ್ರತಿಭಟನೆಯಿಂದ ಮುಜುಗರಕ್ಕೆ ಈಡಾದ ಸಿಎಂ ಸಿಟ್ಟಿಗೆದ್ದರು. ‘ನರೇಂದ್ರ ಮೋದಿಗೆ ವೋಟ್ ಹಾಕ್ತೀರಿ. ಇಲ್ಲಿ ಬಂದು ಹೀಗೆ ಮಾಡ್ತೀರಾ? ಲಾಠಿ ಚಾರ್ಜ್ ಮಾಡಬೇಕಾ ನಿಮಗೆ?’ ಎಂದು ಅವರು ಪ್ರತಿಭಟನಾಕರಾರರನ್ನು ಪ್ರಶ್ನಿಸಿದರು.


ಸಂಬಂಧಿತ ಟ್ಯಾಗ್ಗಳು

Raichur H D Kumaraswamy Grama Vastavya Strike


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ