ಕೊಕೇನ್, ಗಾಂಜಾ ಮಾರುತ್ತಿದ್ದ ವಿದೇಶಿಯರ ಬಂಧನ !

Kannada News

09-06-2017

ಬೆಂಗಳೂರು:- ಮಾದಕ ವಸ್ತು ಕೊಕೇನ್, ಗಾಂಜಾ ಮಾರಾಟ ಮಾಡುತ್ತಿದ್ದಲ್ಲದೇ, ಆನ್‍ಲೈನ್‍ನಲ್ಲಿ ಬಹುಮಾನ ಬಂದಿದೆ ಎಂದು ಸಂದೇಶ ಕಳುಹಿಸಿ ವಂಚಿಸುತ್ತಿದ್ದ, ನೈಜೀರಿಯಾ ಹಾಗೂ ಉಗಾಂಡ ದೇಶದ ಐವರು ಮಹಿಳೆಯರು ಸೇರಿ 8 ಮಂದಿಯನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿಮಾಮ್ ಹೆಡ್ವಿನ್, ಇದುಗೆ ಒಮೆರಾಜ್, ನಂಬ್ಸಿಂದ್ರಾರಿಂತ್, ನಮೀದ್ ಏಂಜಾ, ಯಾಪಿ ಸೋಮಾ, ನಡಿಗೆ ಸಾಮಿನ್, ಹೆಡ್ವಿನ್, ಬಂಧಿತ ಆರೋಪಿಗಳಾಗಿದ್ದು, ಇವರಲ್ಲಿ 6 ಮಂದಿ ಉಗಾಂಡಾದವರಾದರೆ, ಉಳಿದಿಬ್ಬರು ನೈಜೀರಿಯನ್ನರಾಗಿದ್ದಾರೆ. ಬಂಧಿತರಿಂದ 1.7 ಕೆ.ಜಿ ಗಾಂಜಾ, 100 ಗ್ರಾಂ ಕೊಕೇನ್, ಒಂದು ಲ್ಯಾಪ್‍ಟಾಪ್, 8 ಮೊಬೈಲ್‍ಗಳು ಸೇರಿ, 8 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೆ.ಆರ್. ಪುರಂ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಟಿ.ಸಿ. ಪಾಳ್ಯದ ಸೇಕ್ರಿಯಾಟ್ ರಸ್ತೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಗಾಂಜಾ ಮತ್ತು ಕೊಕೇನ್ ಅನ್ನು ಬೇರೆ ಕಡೆಯಿಂದ ತರಿಸಿ ಚಿಕ್ಕ ಚಿಕ್ಕ ಪಟ್ಟಣಗಳನ್ನಾಗಿ ಮಾಡಿಕೊಂಡು ನಗರದ ವಿವಿಧೆಗೆ ಸಂಚರಿಸಿ ಮಾರಾಟ ಮಾಡುತ್ತಿದ್ದರು. ಇದಲ್ಲದೆ ಆನ್ ಲೈನ್ ನಲ್ಲಿ ಬಹುಮಾನ ಬಂದಿದೆ ಎನ್ನುವ ಸಂದೇಶ ಕಳುಹಿಸಿ ಅದನ್ನು ಪಡೆದುಕೊಳ್ಳಲು ಇಂತಿಷ್ಟು ಹಣ ನೀಡುವಂತೆ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ವಂಚನೆ ನಡೆಸುತ್ತಿದ್ದರು.  ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೆ.ಆರ್. ಪುರಂ ಪೊಲೀಸರು, ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ