ತಬ್ರೇಜ್, ಅಖ್ಲಾಕ್ ರನ್ನು ಮೋದಿ ನೆನಪಸಿಕೊಳ್ಳಲಿಲ್ಲ: ಓವೈಸಿ

Asaduddin Owisi Statement

26-06-2019

ದೆಹಲಿ: ಪ್ರಧಾನಿ ಮೋದಿಯವರು ಶಾ ಬನೂರನ್ನು ನೆನಪಿಸಿಕೊಂಡರು. ತಬ್ರೇಜ್ ಅನ್ಸಾರಿ, ಅಖ್ಲಾಕ್, ಪೆಹ್ಲು ಖಾನ್ ಅವರನ್ನು ಯಾಕೆ ನೆನಪಿಸಿಕೊಳ್ಳಲಿಲ್ಲ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ. ನಿನ್ನೆ ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ವೇಳೆ ಕಾಂಗ್ರೆಸ್ ವಿರುದ್ಧ ಆರೋಪಿಸಿದ್ದ ಪ್ರಧಾನಿ ಮೋದಿ, ಹಳೆಯ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಈ ಕುರಿತು ಪ್ರಶ್ನಿಸಿರುವ ಓವೈಸಿ, ಮೋದಿಯವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ಅಲೀಮುದ್ದೀನ್ ಅನ್ಸಾರಿಯವ ಹತ್ಯೆಗೈದವರ ಕೊರಳಿಗೆ ಹಾರ ಹಾಕಿದ್ದನ್ನು ಏಕೆ ನೆನಪಿಸಿಕೊ‍ಳ್ಳಲಿಲ್ಲ? ಎಂದು ಪ್ರಶ್ನಿಸಿದರು. ಅಲ್ಲದೇ, ಕೆಲವರು ಕೊಳಕು ಹೇಳಿಕೆ ನೀಡುತ್ತಿರುವ ಸಮಯದಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ನೀವೇಕೆ ಕೊಡುತ್ತಿಲ್ಲ ಎಂದರು.

ನಿಮ್ಮ ಪಕ್ಷದಿಂದ ಯಾರೊಬ್ಬರೂ ಸಂಸದರಾಗಿಲ್ಲ. ಅವರನ್ನು (ಮುಸ್ಲಿಮರನ್ನು) ಹಿಂದಕ್ಕಿಟ್ಟಿರುವುದು ಯಾರು? ನೀವೇ. ನಿಮ್ಮ(ಬಿಜೆಪಿಯ) ಮಾತು ಮತ್ತು ಸಿದ್ಧಾಂತದ ನಡುವೆ ಅಂತರವಿದೆ. ನರಸಿಂಹರಾವ್ ಅವರು ಬಾಬ್ರಿ ಮಸೀದಿ ಧ್ವಂಸಕ್ಕೆ ಜವಾಬ್ದಾರರು. ಅವರು ಪ್ರಧಾನಿಯಾಗಿದ್ದರೂ ಏನನ್ನೂ ಮಾಡಲಿಲ್ಲ. ಈಗ ಪ್ರಧಾನಿ ಮೋದಿ ತಮ್ಮ ಸಿದ್ಧಾಂತದ ಪ್ರಕಾರ ಕೆಲಸ ಮಾಡಲು ಬಯಸಿದ್ದಾರೆ ಎಂದು ಅವರು ಹೇಳಿದರು.

ಗೋರಕ್ಷಕರು ಅಖ್ಲಾಕ್, ಪೆಹ್ಲು ಖಾನ್ ಮತ್ತಿತರ ಮುಸ್ಲಿಮರನ್ನು ಗೋರಕ್ಷಣೆಯ ನೆಪದಲ್ಲಿ ಹತ್ಯೆಗೈದಿದ್ದರು. ತಬ್ರೇಜ್ ಅನ್ಸಾರಿಯವರನ್ನು ಜೈಶ್ರೀರಾಮ್ ಎಂದು ಹೇಳಲು ನಿರಾಕರಿಸಿದ್ದರಿಂದ ಹಲ್ಲೆಗೈದು ಹತ್ಯೆಗೈದಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಯಾವೊಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಸಾದುದ್ದೀನ್ ಓವೈಸಿ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Asaduddin Owisi Session PM Modi Muslim


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ