ಪ್ರತಿ ಹನಿ ನೀರನ್ನು ಉಳಿಸುವೆಡೆ ನಾವು ಕೆಲಸ ಮಾಡಬೇಕು: ಮೋದಿ

we have to work towards saving every drop of water

25-06-2019

ದೆಹಲಿ: ರಾಷ್ಟ್ರಪತಿ ಭಾಷಣಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ ಪ್ರಧಾನಿ ಮೋದಿ ದೇಶದಲ್ಲಿ ಕಾಡುತ್ತಿರುವ ನೀರಿನ ಸಮಸ್ಯೆಯ ಬಗ್ಗೆ ಮಾತನಾಡಿ, ನಾವು ಪ್ರತಿಯೊಂದು ಹನಿ ನೀರನ್ನು ಸಂಗ್ರಹಿಸಿ ಉಳಿಸುವ ಪ್ರಯತ್ನ ಮಾಡಬೇಕು, ಡಾ ಬಿ ಆರ್ ಅಂಬೇಡ್ಕರ್ ನೀರಾವರಿಗಾಗಿ ಶ್ರಮಿಸಿದ್ದಾರೆ, ನಾವು ಸ್ವತಂತ್ರ ಹೋರಾಟಗಾರರು ಕಂಡ ಕನಸಿನ ಭಾರತವನ್ನು ಕಟ್ಟಬೇಕು, ಮಹಾತ್ಮ ಗಾಂಧಿಯವರ ಕನಸಿನ ಭಾರತ ನಮ್ಮದಾಗಬೇಕು. ರಾಜಕೀಯಕ್ಕಿಂತ ದೇಶ ಮುಖ್ಯ ಎಂದು ಹೇಳಿದ್ದಾರೆ. ಇದಲ್ಲದೆ 1975ರ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಅಂದು ಕಾಂಗ್ರೇಸ್ ಪ್ರಜಾಪ್ರಭುತ್ವವನ್ನು ಜೈಲಿಗೆ ಕಳುಹಿಸಿತು ಇಡೀ ಭಾರತವನ್ನೇ ಜೈಲು ಕೋಣೆಯನ್ನಾಗಿ ಮಾಡಿತು ಎ೦ದು ಕಾಂಗ್ರೇಸ್ ಅನ್ನು ಜರಿದ ಅವರು  ಪ್ರವಾಸೋದ್ಯಮವನ್ನು ಬೆಳೆಸಬೇಕು ಎ೦ದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

PM speech Modi Narendra Modi Parliamentary speech


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ