ಚುನಾವಣಾ ಅಕ್ರಮ: ಆಪ್ ನಾಯಕನಿಗೆ ಮೂರು ತಿಂಗಳ ಸಜೆ

court fines AAP MLA

25-06-2019

ದೆಹಲಿ: ಸಂಸದರು ಮತ್ತು ಶಾಸಕರ ವಿರುದ್ಧದ ತ್ವರಿತ ವಿಚಾರಣೆ ನ್ಯಾಯಾಲಯ ಆಪ್ ಶಾಸಕ ಮನೋಜ್ ಕುಮಾರ್ ಅವರಿಗೆ 3 ತಿಂಗಳ ಸೆರೆವಾಸ ಮತ್ತು 10,000 ದಂಡ ವಿಧಿಸಿದೆ. 2013ರಲ್ಲಿ ವಿಧಾನಸಭೆ ಚುನಾವಣೆ ವೇಳೆ ಕಲ್ಯಾಣ್ ಪುರಿಯಲ್ಲಿ ಮತಗಟ್ಟೆಯಲ್ಲಿ ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸಿದ ಆರೋಪ ಮನೋಜ್ ವಿರುದ್ಧ ಎದುರಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್, ಮನೋಜ್ ತಪ್ಪಿತಸ್ಥ ಎಂದು ಹೇಳಿರುವುದಲ್ಲದೇ, ಸೆರೆವಾಸ ಮತ್ತು ದಂಡದ ಪ್ರಮಾಣವನ್ನೂ ವಿಧಿಸಿದೆ.


ಸಂಬಂಧಿತ ಟ್ಯಾಗ್ಗಳು

AAP MLA election 2013 court Delhi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ