ಐಎಮ್ಎ ಅಕ್ರಮ: ಮೋಸಹೋದ ಕುಟುಂಬದಲ್ಲೂ ಬಿರುಕು

wife leaves husband after she gets to know that her husband invested in IMA

25-06-2019


ಬೆಂಗಳೂರು: ಐಎಂಎ ಸಮೂಹ ಸಂಸ್ಥೆಯಲ್ಲಿ  ಹೂಡಿಕೆ ಮಾಡಿ ಹಣ ಕಳೆದುಕೊಂಡಿರುವವರ ಕುಟುಂಬದಲ್ಲೂ ಬಿರುಕು ಕಾಣಿಸಿಕೊಂಡಿದೆ.

ಹೋಟೆಲ್ ನಡೆಸುತ್ತಿದ್ದ ಪತಿಯಿದ 26 ವರ್ಷದ ಮಹಿಳೆ ಬೇರೆಯಾಗಲು ಐಎಂಎ ಸಂಸ್ಥೆ ಕಾರಣವಾಗಿದೆ.ಐಎಂಎಯಲ್ಲಿ ಪತಿ 25 ಲಕ್ಷ ರೂ.ಹೂಡಿಕೆ ಮಾಡಿ ಕಳೆದುಕೊಂಡಿರುವುದರಿಂದ. ಆಕ್ರೋಶಗೊಂಡು ಪತಿಯಿಂದ ಪತ್ನಿ ಬೇರೆಯಾಗಿದ್ದಾರೆ.

ಪತ್ನಿ ದೂರವಾಗಿರುವುದರಿಂದ ಪತಿ ವನಿತಾ ಸಹಾಯವಾಣಿಯ ಮೊರೆ ಹೋಗಿದ್ದಾರೆ. ತನ್ನ ಪತಿಯನ್ನು ಕರೆತರಲು ನೆರವು ನೀಡುವಂತೆ ಮನವಿ ಮಾಡಿದ್ದಾರೆ. ವನಿತಾ ಸಹಾಯವಾಣಿಯ ಹಿರಿಯ ಕೌನ್ಸಿಲರ್ ಇಕ್ಬಾಲ್ ಅಹ್ಮದ್ ಹೇಳುವ ಪ್ರಕಾರ 32 ವರ್ಷದ ವ್ಯಕ್ತಿ ಮಹಿಳಾ ಸಹಾಯವಾಣಿಗೆ ಮನವಿ ಸಲ್ಲಿಸಿ ತನ್ನನ್ನು ತೊರೆದಿರುವ ಪತ್ನಿಯನ್ನು ಕರೆದುಕೊಂಡು ಬರಲು ನೆರವು ನೀಡುವಂತೆ ತಿಳಿಸಿದ್ದಾರೆಂದು ಹೇಳಿದರು.

ಚಿಕ್ಕಮಗಳೂರು ನಿವಾಸಿ ಮೊಹ್ಮದ್ ಹಮೀರ್ ಹೋಟೆಲ್ ಉದ್ಯಮಿಯಾಗಿದ್ದು, ಬೆಂಗಳೂರಿನಲ್ಲಿ ಆಸ್ತಿ ಖರೀದಿಸಲು ಬಯಸಿದ್ದರು. ಈ ವೇಳೆ ತನ್ನ ಬಳಿಯಿರುವ ಜಮೀನನ್ನು ಮಾರಾಟ ಮಾಡುವುದಾಗಿ ತನ್ನ ಪತ್ನಿ ಅಮ್ರೀನ್‍ಗೆ ತಿಳಿಸಿದ್ದರು.

ಈ ಜಮೀನನ್ನು 25 ಲಕ್ಷ ರೂ.ಗೆ ಮಾರಾಟ ಮಾಡಿದ್ದನು. ಆದರೆ, ಈತನ ಸ್ನೇಹಿತ ಮಾರ್ಚ್ ತಿಂಗಳಿನಲ್ಲಿ ಐಎಂಎನಲ್ಲಿ ಹಣ ಹೂಡಿಕೆ ಮಾಡುವಂತೆ ಸಲಹೆ ಮಾಡಿ ಇದರಿಂದ ಸಾಕಷ್ಟು ಲಾಭ ಬರಲಿದೆ ಎಂದು ಸಲಹೆ ಮಾಡಿದನ್ನು. ಇದನ್ನು ನಂಬಿದ್ದ ಮೊಹ್ಮದ್ ಹಮೀರ್ 25 ಲಕ್ಷ ರೂ.ನ್ನು ಹೂಡಿಕೆ ಮಾಡಿದ್ದನು. ಆದರೆ, ಈ ವಿಷಯವನ್ನು ಪತ್ನಿಗೆ ತಿಳಿಸಿರಲಿಲ್ಲ.

ಐಎಂಎ ಹಗರಣ ಬೆಳಕಿಗೆ ಬರುತ್ತಿದ್ದಂತೆ ಈ ವಿಷಯವನ್ನು ತನ್ನ ಪತ್ನಿಗೆ ತಿಳಿಸಿದ್ದಾನೆ. ಈ ವಿಷಯ ಕೇಳಿ ಪತ್ನಿಗೆ ಆಘಾತವಾಗಿದೆ. ಐಎಂಎ ಸಂಸ್ಥೆಯಲ್ಲಿ ಹಣ ಹೂಡಿದ್ದಕ್ಕಾಗಿ ಪತಿಯನ್ನು ಅಮ್ರೀನ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡು ತನ್ನ 4 ವರ್ಷದ ಪುತ್ರಿಯೊಂದಿಗೆ ಮನೆ ತೊರೆದಿದ್ದಾಳೆ. ಪತಿ ಹಾಗೂ ಕುಟುಂಬ ಸದಸ್ಯರು ಆಕೆಯ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಈಗ ಐಎಂಎ ಸಂಸ್ಥೆಯಲ್ಲಿ ಹಣ ತೊಡಗಿಸಿರುವವರ ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿದೆ. ಹಣ ಕಳೆದುಕೊಂಡವರು ಮಹಿಳಾ ಸಹಾಯವಾಣಿಗೆ ಆಗಮಿಸಿ ಅಲವತ್ತುಕೊಂಡಿರುವ ದೃಶ್ಯ ಕಂಡು ಬಂದಿದೆ.

ಹಣ ಕಳೆದುಕೊಂಡವ ಪೈಕಿ ಒಬ್ಬರು ತನ್ನ ಮಕ್ಕಳಿಗೆ ಶಾಲೆಯ ಶುಲ್ಕ ಭರಿಸಲು ಆಗುತ್ತಿಲ್ಲ ಎಂದು ಮನವಿ ಸಲ್ಲಿಸಿದರೆ, ಮತ್ತೊಂದು ಕುಟುಂಬ ಮನೆ ಬಾಡಿಗೆ ಪಾವತಿಸಲು ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
 


ಸಂಬಂಧಿತ ಟ್ಯಾಗ್ಗಳು

IMA IMA scam IMA jewels mohammed mansoor khan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ