4 ಶಂಕಿತ ಇಸ್ಲಾಮಿಕ್ ಸ್ಟೇಟ್ ಸದಸ್ಯರ ಬಂಧನ

4 suspected islamic state members arrested in Kolkata

25-06-2019

ಕೊಲ್ಕತ್ತಾ: ಕೊಲ್ಕತ್ತಾ ಪೊಲೀಸ್ ವಿಶೇಷ ಕಾರ್ಯಪಡೆ ೪ ಶಂಕಿತ ಇಸ್ಲಾಮಿಕ್ ಸ್ಟೇಟ್ ಸದಸ್ಯರನ್ನು ಬಂಧಿಸಿದೆ. ಬಂಧಿತ ಮೂವರಲ್ಲಿ ಮೂರುಜನ ಬಾಂಗ್ಲಾದೇಶದವರಾಗಿದ್ದು, ಒಬ್ಬ ಭಾರತೀಯನಾಗಿದ್ದಾನೆ. ಬಂಧಿತರು ಬಾಂಗ್ಲಾದೇಶದ ಜಮತ್-ಉದ್-ದಾವ ಸಂಘಟನೆಯ ಸದಸ್ಯರಾಗಿದ್ದು, ಬಾಂಗ್ಲಾದೇಶದಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಬಂದಿದ್ದಾರೆ. ಬಂಧಿತ ಭಾರತೀಯನು ಕೂಡ ಸಂಘಟನೆಯ ಸದಸ್ಯನಾಗಿದ್ದು ಅವರಿಗೆ ಸಹಾಯ ಮಾಡಿದ್ದಾನೆ. ಬಂಧಿತರಿಂದ ಹಲವು ಜಿಹಾದ್ ಗೆ ಸಂಭಂದಿಸಿದ ವಿಡಿಯೋಗಳು ಮತ್ತು ಬರಹಗಳನ್ನು ಒಶಪಡಿಸಿಕೊಂಡಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವವನ್ನು ಅಳಿಸಿಹಾಕಿ ಇಸ್ಲಾಮಿಕ್ ನಾಯಕನ ಆಳ್ವಿಕೆಯಲ್ಲಿ ಶರಿಯಾ ( ಇಸ್ಲಾಮಿಕ್) ಕಾನೂನನ್ನು ಜಾರಿ ಬರುವಂತೆ ಮಾಡುವುದು ಈ ಸಂಘಟನೆಯ ಗುರಿಯಾಗಿದೆ.


ಸಂಬಂಧಿತ ಟ್ಯಾಗ್ಗಳು

islamic state suspect sharia kolkata police Bangladesh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ