ಮದುವೆಯಾಗಿಲ್ಲವೆಂದು, ನೊಂದು ಆತ್ಮಹತ್ಯೆ !

Kannada News

09-06-2017

ಬೆಂಗಳೂರು:- ವಯಸ್ಸು 38 ಕಳೆದರೂ ಇನ್ನೂ ಮದುವೆಯಾಗಿಲ್ಲವೆಂದು ಮಾನಸಿಕ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಗುರುವಾರ ನಡೆದಿದೆ. ಮಹದೇವಪುರದ, ಉದಯನಗರದ ವಿವೇಕಾನಂದ ಸ್ಟ್ರೀಟ್‍ನ ಮಂಜುನಾಥರಾವ್ ಮೃತಪಟ್ಟವರಾಗಿದ್ದಾರೆ, ಪಿಯುಸಿ ಮುಗಿಸಿದ್ದ ರಾವ್ ಅವರಿಗೆ ಇಲ್ಲಿವರೆಗೆ ಯಾವುದೇ ಸರಿಯಾದ ನೌಕರಿ ಸಿಕ್ಕಿರಲಿಲ್ಲ, ಎಷ್ಟು ಕಡೆ ಹುಡುಕಿದರೂ ಯಾರೂ ವಿವಾಹಕ್ಕೆ ಯುವತಿಯನ್ನು ಕೊಡದಿದ್ದರಿಂದ ನೊಂದಿದ್ದರು. ರಾವ್ ಅವರ ತಮ್ಮನಿಗೂ 35 ವರ್ಷ ಮೀರಿದ್ದು ಅವನಿಗೂ ಇನ್ನೂ ಮದುವೆಯಾಗಿರಲಿಲ್ಲ ಇದರಿಂದ ಖಿನ್ನತೆಗೊಳಗಾಗಿದ್ದ ರಾವ್ ನಿನ್ನೆ ತಾಯಿ ಶಾಂತಬಾಯಿ ಕೆಲಸಕ್ಕೆ ಹೋದ ನಂತರ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ