ಡಿಸೆಂಬರ್ ನಲ್ಲಿ ವರುಣ್ ಧವನ್ ಮದುವೆ?

Varun Dhawan-Natasha Dalal wedding this December?

25-06-2019

ಬಾಲಿವುಡ್ ನಟ ವರುಣ್ ಧವನ್ ತಮ್ಮ ಬಾಲ್ಯದ ಗೆಳತಿ ನತಾಶಾ ದಲಾಲ್ ಜೊತೆ ಓಡಾಡುತ್ತಿರುವುದು ಹಳೆ ಸುದ್ದಿ ಆದರೆ ವರುಣ್ ಇದೇ ಡಿಸೆಂಬರ್ ನಲ್ಲಿ ನತಾಶಾರನ್ನು ಮದುವೆಯಾಗ್ತಾರೆ ಅನ್ನೋ ಸುದ್ದಿ ಬಾಲಿವುಡ್ ತುಂಬೆಲ್ಲ ಹರಿದಾಡ್ತಿದೆ.

2012 ರಲ್ಲಿ ಚೊಚ್ಚಲ ಚಿತ್ರ ಸ್ಟೂಡೆಂಟ್ ಆಪ್ ದ ಇಯರ್ ಚಿತ್ರದಲ್ಲೇ ಸ್ಟಾರ್ ನಟ ರಾದ ವರುಣ್, ಅದರ ನಂತರ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವೆಲ್ಲದರ ಮಧ್ಯೆ ಡಿಸೆಂಬರ್ ನಲ್ಲಿ ಮದುವೆಯಾಗ್ತಾರೆ ಅನ್ನೋ ಸುದ್ದಿ ಕುರಿತು ಪ್ರತಿಕ್ರಿಯಿಸಿರೋ ವರುಣ್, ಇವೆಲ್ಲ ಗಾಳಿಸುದ್ದಿಗಳಷ್ಟೇ. ಇದ್ಯಾವುದೂ ನಿಜವಲ್ಲ ಎಂದಿದ್ದಾರೆ. ಅಲ್ಲದೇ ತಂದೆ ಡೇವಿಡ್ ಧವನ್ ಕೂಡ ಮದುವೆ ಪಕ್ಕಾ ಆದಲ್ಲಿ ಎಲ್ಲರಿಗೂ ಎಲ್ಲ ವಿವರವನ್ನು ತಿಳಿಸುತ್ತೇವೆ ಎಂದಿದ್ದಾರೆ.

ಸದ್ಯ ವರುಣ್ ಧವನ್ ರೆಮೋ ನಿರ್ದೇಶನದ ಸ್ಟ್ರೀಟ್ ಡಾನ್ಸರ್ 3ಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Varun Dhawan Marriage Natasha Dalal Bollywood


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ