ಕೇಂದ್ರ ಸಚಿವರ ಮನೆ ಮುಂದೆ ಗುತ್ತಿಗೆ ನೌಕರರ ಧರಣಿ

Protest against Union Health minister

25-06-2019

ದೆಹಲಿ: ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆ, ರಾಮಮನೋಹರ ಲೋಹಿಯಾ ಆಸ್ಪತ್ರೆ, ಲೇಡಿ ಹಾರ್ಡಿಂಗ್ ಆಸ್ಪತ್ರೆ, ಕಲಾವತಿ ಆಸ್ಪತ್ರೆ ಮತ್ತು ಇತರ ಕೇಂದ್ರ ಸರ್ಕಾರಿ ಒಡೆತನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮನೆಯ ಮುಂದೆ ಪ್ರತಿಭಟನೆ ನಡೆಸಿದರು. ಇದ್ದಕ್ಕಿದ್ದಂತೆ ತಮ್ಮನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕನಿಷ್ಠ 5,000 ನೌಕರರ ಅಗತ್ಯವಿದೆ. ಆದರೆ, ಇಷ್ಟು ಪ್ರಮಾಣದ ಸಿಬ್ಬಂದಿಯ ಅವಶ್ಯಕತೆ ಇರುವ ಸಮಯದಲ್ಲಿ ನಮ್ಮನ್ನು ಸೇವೆಯಿಂದ ವಜಾಗೊಳಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಕೇಂದ್ರ ಬಳಸು ಮತ್ತು ಬಿಸಾಡು ನೀತಿಯನ್ನು ಅನುಸರಿಸುತ್ತಿದೆ. ನಾವು ಇಲ್ಲಿಗೆ ನಿನ್ನೆಯೇ ಆಗಮಿಸಿದ್ದೇವೆ. ಆದರೆ, ಸಚಿವರು ಇಲ್ಲ ಎಂದು ಮಾಹಿತಿ ನೀಡಲಾಯಿತು. ಇಂದು ಕೂಡ ಅದೇ ಸಬೂಬು ಹೇಳುತ್ತಿದ್ದಾರೆ. ನಮಗೆ ನೇಮಕ ಪತ್ರ ನೀಡುವವರೆಗೆ ಸಫ್ದರ್ ಜಂಗ್‍ನಲ್ಲಿ ಮುಷ್ಕರ ನಡೆಸುತ್ತೇವೆ ಎಂದು ಅವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Harshavardhan Protest Delhi Hospital


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ