ನೀರಿನಲ್ಲಿ ನಿಂತ ಸ್ಕೂಲ್ ಬಸ್ : ವಿದ್ಯಾರ್ಥಿಗಳು ಪಾರು

School Van Stuck In Water In UP

25-06-2019

ಉತ್ತರ ಪ್ರದೇಶದ ರಾಮ್ಕೋಲಾ ಎಂಬಲ್ಲಿ ಶಾಲಾ ಬಸ್ ನೀರಿನಲ್ಲಿ ನಿಂತುಹೋದ ಘಟನೆ ನಡೆದಿದ್ದು, ಬಸ್ ನಲ್ಲಿದ್ದ 8 ಮಂದಿ ವಿದ್ಯಾರ್ಥಿಗಳು ಜೀವಾಪಾಯದಿಂದ ಪಾರಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

ನೀರು ತುಂಬಿರುವ ಅಂಡರ್ ಪಾಸ್ ನಲ್ಲಿ ಹೋಗುತ್ತಿದ್ದ ಸ್ಕೂಲ್ ಬಸ್ ಅರ್ಧದಲ್ಲಿಯೇ ನೀರಿನಲ್ಲಿ ಮುಳುಗಿದೆ. ಬೆಳಗ್ಗೆ 7 ಗಂಟೆಗೆ ಮಕ್ಕಳನ್ನು ಶಾಲೆಗೆ ಬಿಡಬೇಕೆಂಬ ಗಡಿಬಿಡಿಯಲ್ಲಿ ಜೋರಾಗಿ ಹೊರಟಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಈ ಮಧ್ಯೆ ಅದೃಷ್ಟವಶಾತ್ ಸ್ಥಳೀಯರು ವಿದ್ಯಾರ್ಥಿಗಳನ್ನು ಕಾಪಾಡಿದ್ದಾರೆ.

ಇನ್ನು, ಈ ದಾರಿಯಲ್ಲಿ ಹೋಗುವುದು ಬೇಡ, ಇದರಲ್ಲಿ ನೀರಿದೆ. ಬೇರೆ ಮಾರ್ಗದಿಂದ ಹೋಗೋಣವೆಂದರೂ ಡ್ರೈವರ್ ತಮ್ಮ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ ಎಂದು ವಿದ್ಯಾರ್ಥಿಯೊಬ್ಬ ತಿಳಿಸಿದ್ದಾನೆ. ಇಂತಹ ಘಟನೆ ಭವಿಷ್ಯದಲ್ಲಿ ಘಟಿಸದಂತೆ ನೋಡಿಕೊಳ್ಳುತ್ತೇವೆಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.


ಸಂಬಂಧಿತ ಟ್ಯಾಗ್ಗಳು

School bus Students UttarPradesh Underpass


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ