ದಿಶಾ ಹಾಗೂ ಟೈಗರ್ ದೂರ ದೂರ?

Disha Patani And Tiger Shroff Have

25-06-2019

ಬಾಲಿವುಡ್ ನಟಿ ದಿಶಾ ಪಠಾಣಿ ಹಾಗೂ ನಟ ಟೈಗರ್ ಶ್ರಾಫ್ ಡೇಟಿಂಗ್ ನಲ್ಲಿದ್ದಿದ್ದು ಎಲ್ಲರಿಗೂ ಗೊತ್ತೇ ಇದೆ. ಪ್ರಮುಖ ಪಾರ್ಟಿ, ಸಮಾರಂಭ ಗಳಿಗೆ ಒಟ್ಟಿಗೆ ಹೋಗುತ್ತಿದ್ದ ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದರು. ಆದರೆ ಕಳೆದ ಕೆಲ ವಾರದಿಂದ ಈ ತಾರಾ ಜೋಡಿ ದೂರವಾಗಿದ್ದಾರೆ ಎಂಬ ಸುದ್ದಿ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ.

ಈ ಕುರಿತು ವರದಿ ನೀಡಿರುವ ಖಾಸಗಿ ಪತ್ರಿಕೆಯೊಂದು ಟೈಗರ್ ಹಾಗೂ ದಿಶಾ ಅಧಿಕೃತವಾಗಿ ದೂರವಾಗಿದ್ದಾರೆ ಎಂದು ತಿಳಿಸಿದೆ. ಅಲ್ಲದೇ ಕೆಲ ವಿಷಯಗಳ ಕುರಿತಾದ ಮನಸ್ತಾಪದಿಂದಾಗಿ ಇಬ್ಬರೂ ಒಪ್ಪಿಗೆಯಿಂದಲೇ ದೂರವಾಗಿದ್ದಾರೆ. ಆದರೆ ಅವರಿಬ್ಬರಿಗೂ ಕಾಮನ್ ಆಗಿರೋ ಫ್ರೆಂಡ್ಸ್ ಜೊತೆ ಇಬ್ಬರೂ ಸಹ ಸಂಪರ್ಕದಲ್ಲಿ ಇದ್ದಾರೆ ಎಂದು ತಿಳಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

Disha Patani Bollywood Tiger Shroff Actor


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ