ಮನ್ಸೂರ್ ತಕ್ಷಣ ಶರಣಾದರೆ ಸೂಕ್ತ ರಕ್ಷಣೆ : ಸಚಿವ ಜಮೀರ್

Jameer ahmad Khan statement

25-06-2019

ಬೆಂಗಳೂರು: ಐಎಂಎ ವಂಚನೆ ಪ್ರಕರಣದ ರೂವಾರಿ ಮೊಹಮದ್ ಮನ್ಸೂರ್ ಖಾನ್ ಯಾರಿಗೂ ಹೆದರುವ ಅಗತ್ಯವಿಲ್ಲ ಪೊಲೀಸರಿಗೆ ಶರಣಾಗಿ ವಾಸ್ತವ ಸಂಗತಿ ಏನು ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ವಕ್ಫ್ ಮತ್ತು ಅಲ್ಪಸಂಖ್ಯಾತ ಸಚಿವ ಜಮೀರ್‌ ಅಹ್ಮದ್ ಖಾನ್ ಒತ್ತಾಯಿಸಿದ್ದಾರೆ
ಆರೋಪಿ ಮೊಹಮದ್ ಮನ್ಸೂರ್ ತಕ್ಷಣವೇ ಶರಣಾದರೆ ಸರ್ಕಾರ ಅವರಿಗೆ ಸೂಕ್ತ ರಕ್ಷಣೆ ಒದಗಿಸಲಿದೆ ಎಂದು ಅಭಯ ನೀಡಿರುವ ಅವರು, ರಕ್ಷಣೆ ಸಂಬಂಧ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಜೊತೆ ವೈಯಕ್ತಿವಾಗಿ ಮಾತನಾಡುವುದಾಗಿಯೂ ತಿಳಿಸಿದ್ದಾರೆ.
ವಿಕಾಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ತಾವು ಮನ್ಸೂರ್ ಮನೆಗೆ ತಾವು ಭೇಟಿ ನೀಡಿದ ಸಂದರ್ಭದಲ್ಲೂ ಸರ್ಕಾರ ನಿಮ್ಮ ಜೊತೆ ಇದೆ. ಮುಂದೆ ಬಂದು ಸತ್ಯ ಹೇಳಿ ಎಂದು ಧೈರ್ಯ ತುಂಬಿದ್ದಾಗಿ ಸ್ಪಷ್ಟಪಡಿಸಿದರು.
ಮನ್ಸೂರ್ ಖಾನ್ ಭಯ ಬೀಳುವ ಅವಶ್ಯಕತೆಯಿಲ್ಲ‌. ಯಾರಿಂದ ತಮಗೆ ಅನ್ಯಾಯವಾಗಿದೆ ಎಂಬುದನ್ನು ಬಹಿರಂಗವಾಗಿ ಹೇಳಿದರೆ ವಾಸ್ತವ ಸಂಗತಿ ಬೆಳಕಿಗೆ ಬರಲಿದೆ. ವಂಚನೆಯಾಗಿದ್ದರೆ ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ನ್ಯಾಯ ಒದಗಿಸಲಿದ್ದಾರೆ ಎಂದರು.
ಮನ್ಸೂರ್ ಖಾನ್ ತಮ್ಮಿಂದ ವಂಚನೆಯಾಗಿದೆ ಎಂದು ಹೇಳಿಲ್ಲ. ಮಾಧ್ಯಮಗಳಲ್ಲಿ ನನ್ನ ಹೆಸರು ಎಲ್ಲಿಯೂ ಬಂದಿಲ್ಲ. ಮಾಜಿ ಸಚಿವ ರೋಷನ್ ಬೇಗ್. ಹಾಲಿ ಸಚಿವ ದೇಶಪಾಂಡೆ ಹೆಸರು ಕೇಳಿ ಬಂದಿರುವುದನ್ನು ನೋಡಿದ್ದೇನೆ. ಯಾರಿಂದ ಅನ್ಯಾಯವಾಗಿದೆ ಎಂದು ಶರಣಾಗಿ ಪಟ್ಟಿ ಕೊಟ್ಟರೆ ತನಿಖೆ ನಡೆಸಲು ಸಹಕಾರಿಯಾಗಲಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

Mansoor Khan IMA Jameer ahmad Khan statement Cheating Case


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ