ನೀರು ಸಂಸ್ಕರಣ ಘಟಕ ಕಡ್ಡಾಯಕ್ಕೆ ಕಾನೂನು: ಪರಮೇಶ್ವರ್

Dr. G. Parameshwar Statement

21-06-2019

ಬೆಂಗಳೂರು: ಹೊಸದಾಗಿ ಅಪಾರ್ಟ್‍ಮೆಂಟ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ನೀರು ಸಂಸ್ಕರಣ ಘಟಕ(ಎಸ್‍ಟಿಪಿ)ಅಳವಡಿಸಿಕೊಳ್ಳುವ ಸಂಬಂಧ ನೂತನ ಕಾನೂನು ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ನಗರದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸುವರ್ಣ ಭವನದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಬಳಿಕ ಮಾತನಾಡಿದರು. ಬೆಂಗಳೂರಿಗೆ ನೀರಿನ ಬವಣೆ ನೀಗಿಸಲು ಆಯಾ ಅಪಾರ್ಟ್‍ಮೆಂಟ್‍ಗಳಲ್ಲಿ ಎಸ್‍ಟಿಪಿ ನಿರ್ಮಾಣ ಮಾಡಿಕೊಳ್ಳುವುದರಿಂದ ನೀರಿನ ಸಮಸ್ಯೆ ತಲೆದೂರುವುದಿಲ್ಲ. ಹೀಗಾಗಿ ಈ ಸಂಬಂಧ ಕಾನೂನು ತರುವುದು ಎಂದು ಹೇಳಿದರು.

ನಗರದಲ್ಲಿರುವ 1.3 ಕೋಟಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ಕಾವೇರಿ ಬಿಟ್ಟರೆ ಬೇರೆ ಯಾವ ಮೂಲವು ಇಲ್ಲ. ಪ್ರಸ್ತುತ 5,500 ಕೋಟಿ ವೆಚ್ಚದಲ್ಲಿ 5ನೇಹಂತದ ಕಾವೇರಿ ನೀರು ತರಲಾಗುತ್ತಿದೆ ಎಂದರು. ತಿಪ್ಪಗೊಂಡನಹಳ್ಳಿ ಡ್ಯಾಂನನ್ನು 340 ಕೋಟಿ ರು.ವೆಚ್ಚದಲ್ಲಿ ಪುನಶ್ಚೇತನ ಮಾಡಲಾಗುತ್ತಿದೆ. ಜೊತೆಗೆ 1300 ಕೋಟಿ ವೆಚ್ಚದಲ್ಲಿ  ಎತ್ತಿನಹೊಳೆ ಯೋಜನೆ ಮೂಲಕ 2.5 ಟಿಎಂಸಿ ನೀರು ತರಲಾಗುತ್ತದೆ. ಈ ಮೂಲವೂ ಕೂಡ ಸಾಲದು ಎಂದು ತಿಳಿಸಿದರು.

ಲಿಂಗನಮಕ್ಕಿಯಿಂದ ನೀರು ತರಲು ಡಿಪಿಆರ್ ಮಾಡಲು ಸೂಚಿಸಿದ್ದೇನೆ. ವಿದ್ಯುತ್ ಉತ್ಪಾದನೆಯಾದ ನೀರು ಸಮುದ್ರಕ್ಕೆ ಹೋಗಲಿದೆ. ಈ ನೀರನ್ನು ಬೆಂಗಳೂರಿಗೆ ತರಲು ಯೋಜಿಸಿದ್ದೇವೆ. ಮುಂದಿನ ದಿನದಲ್ಲಿ ಕನಿಷ್ಠ 10ಟಿಎಂಸಿ ನೀರನ್ನು ತರಲಾಗುತ್ತೆ.ಆದರೆ ಇದಕ್ಕೂ ವಿರೋಧ ವ್ಯಕ್ತವಾಗಿದೆ. ಅವರ ಮನವೊಲಿಸಿಯೇ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದರು.ಬೆಂಗಳೂರಿಗೆ ನೀರು ತರಲು ಎಲ್ಲಾ ಮೂಲಗಳಿಂದಲೂ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.


ಸಂಬಂಧಿತ ಟ್ಯಾಗ್ಗಳು

Dr. G. Parameshwar Law Water Apartment


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ