IMA ತನಿಖೆ: ಎಸ್ ಐ ಟಿ ಯಿಂದ ಇನ್ನೂ ೫ ನಿರ್ದೇಶಕರ ವಶ

SIT arrests 5 more directors of IMA

21-06-2019

ಬೆಂಗಳೂರು: ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ)ಅಧಿಕಾರಿಗಳು ಇನ್ನೂ ಐವರು ಸಂಸ್ಥೆಯ ನಿರ್ದೇಶಕರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.

ಐಎಂಎ ಸಂಸ್ಥೆಯ ನಿರ್ದೇಶಕರಾಗಿದ್ದ ಶಾದಬ್ ಅಹಮ್ಮದ್(28) ಇಸ್ರಾರ್ ಅಹಮ್ಮದ್(32)ಪುಸೈಲ್ ಅಹಮ್ಮದ್(30)ಮಹಮ್ಮದ್‍ಇದ್ರೀಸ್(30) ಹಾಗೂ ಉಸ್ಮಾನ್ ಅಬರೇಜ್(33)ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಪ್ರಕರಣದಲ್ಲಿ ಇದುವರೆಗೂ ಒಟ್ಟು 13 ಆರೋಪಿಗಳನ್ನು ಬಂಧಿಸಿ ಸಂಸ್ಥೆಯ ಹಣಕಾಸು ವ್ಯವಾಹಗಳು ಹಣ ಹೂಡಿಕೆದಾರರ ಮಾಹಿತಿ ಬಡ್ಡಿ ನೀಡಿರುವುದು ಸಂಸ್ಥೆಯ ಆಸ್ತಿ-ಪಾಸ್ತಿಗಳ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದರು.

30 ಕೆಜಿ ಚಿನ್ನ ಪತ್ತೆ

ಈ ನಡುವೆ ಶಿವಾಜಿನಗರ ಲೇಡಿ ಕರ್ಜನ್ ರಸ್ತೆಯಲ್ಲಿರುವ ಐ.ಎಂ.ಎ ಜ್ಯುವೆಲರಿ ಅಂಗಡಿಯಲ್ಲಿ ಗುರುವಾರ ನಡೆದ ಶೋಧನೆಯಲ್ಲಿ  ಸುಮಾರು 8.5 ಕೋಟಿ ಮೌಲ್ಯದ 30 ಕೆ.ಜಿ ತೂಕದ ಚಿನ್ನಾಭರಣಗಳು. ಸುಮಾರು 9.5 ಕೋಟಿ ಮೌಲ್ಯದ 2627 ಕ್ಯಾರೆಟ್ ಡೈಮಂಡ್ ಸುಮಾರು 2 ಕೋಟಿ ಮೌಲ್ಯದ 450 ಕೆ.ಜಿ ಬೆಳ್ಳಿಯ ವಸ್ತುಗಳು ಸೇರಿ 20 ಕೋಟಿ ಮೌಲ್ಯದ ಮಾಲುಗಳು ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗುರುವಾರ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೂ ಶೋಧನೆ ನಡೆಸಿ ಮಳಿಗೆಯ ಲಾಕರ್‍ಗಳಲ್ಲಿ ಸಂಗ್ರಹಿಸಲಾಗಿದ್ದ ಚಿನ್ನ, ಬೆಳ್ಳಿ & ವಜ್ರದ ಆಭರಣಗನ್ನು ವಶಪಡಿಸಿಕೊಂಡು ಅವುಗಳ ಮೌಲ್ಯಮಾಪನ ನಡೆಸಲಾಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

IMA SIT IMA Directors IMA scam


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ