ಖ್ಯಾತ ರಂಗಕರ್ಮಿ ಮತ್ತು  ಬರಹಗಾರ ಡಿ ಕೆ ಚೌಟಾ ನಿಧನ

D k chuta dies

19-06-2019

ಬೆಂಗಳೂರು: ಖ್ಯಾತ ರಂಗಕರ್ಮಿ ಮತ್ತು  ಬರಹಗಾರ ಡಿ ಕೆ ಚೌಟಾ ಬುಧವಾರ ನಿಧನಹೊಂದಿದರು, ಅವರಿಗೆ 82 ವರ್ಷ  ವಯಸ್ಸಾಗಿತ್ತು.   

ಮೃತರು  ಇಬ್ಬರು ಗಂಡು ಮಕ್ಕಳು ಮತ್ತು ಅಪಾರ  ಅಭಿಮಾನಿಗಳನ್ನು ಅಗಲಿದ್ದಾರೆ.ರಂಗಭೂಮಿ ಜಗತ್ತಿನಲ್ಲಿ ಚಿರಪರಿಚಿತವಾಗಿದ್ದ ಚೌಟಾ, ರಂಗ ತಂಡದ  "ರಂಗ ನಿರಂತರ" ದ ಪ್ರವರ್ತಕರಾಗಿದ್ದರು 

ಕಳೆದ ವರ್ಷ ನಡೆದ ಸಿಜಿಕೆ ರಾಷ್ಟ್ರೀಯ ನಾಟಕ ಉತ್ಸವದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 

ಚೌಟಾ ಅವರ ನಿಧನಕ್ಕೆ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ  ಕೃಷ್ಣ ಬೈರೇಗೌಡ ಕಂಬನಿ ಮಿಡಿದಿದ್ದಾರೆ.

ಅವರ ನಿಧನ  ರಾಜ್ಯದ  ಸಾಂಸ್ಕೃತಿಕ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ ಎಂದು ಸಚಿವರು  ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

D K Chowta theater personality author writer


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ