ಸತ್ಯ ಹೇಳಿದರೆ ಶಿಕ್ಷೆ ಯಾಕೆ?: ಬೇಗ್

Roshan baig Statement

19-06-2019

ಬೆಂಗಳೂರು: ನಾನು ಕಾಂಗ್ರೆಸ್‍ನ ಶಿಸ್ತಿನ ಸಿಪಾಯಿ. ಸಿದ್ದು ಕಾಂಗ್ರೆಸ್‍ನ ಕಾರ್ಯಕರ್ತ ಅಲ್ಲ. ನನ್ನನ್ನು ಅಮಾನತು ಮಾಡಿರುವ ಕುರಿತು ಪಕ್ಷದ ಹಿರಿಯ ನಾಯಕರ ಜೊತೆ ಚರ್ಚೆ ಮಾಡಿರುವ ಕುರಿತು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ರೋಷನ್ ಬೇಗ್ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಮುದ್ದಹನುಮೇಗೌಡ ಅವರನ್ನು ಬಲಿಪಶು ಮಾಡಲಾಯಿತು, ಮೈತ್ರಿ ಮಾಡಿಕೊಂಡು ದೇವೇಗೌಡರನ್ನು ಸೋಲಿಸಲಾಯಿತು. ಮುನಿಯಪ್ಪ ಅವರ ವಿರುದ್ಧವೂ ಷಡ್ಯಂತ್ರ ನಡೆದಿತ್ತು. ನಾನು ಇದನ್ನೆಲ್ಲ ಮಾತನಾಡುವುದು ತಪ್ಪೇ? ನಾನು ಕಾಂಗ್ರೆಸ್‍ನ ಶಿಸ್ತಿನ ಸಿಪಾಯಿ, ಸಿದ್ದು ಕಾಂಗ್ರೆಸ್‍ನ ಕಾರ್ಯಕರ್ತನಲ್ಲ ಎಂದು ವಾಗ್ದಾಳಿ ನಡೆಸಿದರು.

ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ 40,900 ಮತಗಳ ಲೀಡ್ ಕೊಡಿಸಿದ್ದೇನೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್‍ಗುಂಡೂರಾವ್ ಕ್ಷೇತ್ರದಲ್ಲಿ 25,000, ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರದಲ್ಲಿ 9 ಸಾವಿರ, ಸಿದ್ದರಾಮಯ್ಯ ಹಿಂದೆ ಸ್ಪರ್ಧಿಸಿದ್ದ ವರುಣಾ ಕ್ಷೇತ್ರದಲ್ಲಿ 36 ಸಾವಿರ ಬಿಜೆಪಿಗೆ ಲೀಡ್ ಬಂದಿದೆ. ಇದಕ್ಕೆ ಕಾರಣಗಳೇನು? ಇದೆಲ್ಲ ಹೇಗಾಯಿತು? ಎಂದು ಸಮಾಲೋಚನೆ ನಡೆಸಬೇಕಿತ್ತು, ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಮಾಡಬೇಕಿತ್ತು. ಅದನ್ನ ಬಿಟ್ಟು ಏಕಾಏಕಿ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ತಪ್ಪು ಮಾಡಿದ್ದೇನೆ, ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಹೇಳುವುದಾದರೆ ಕಾಂಗ್ರೆಸ್‍ನ ನಾಯಕರ ವಿರುದ್ಧ ಹೇಳಿಕೆ ನೀಡಿದ ಶಾಸಕ ರಮೇಶ್ ಜಾರಕಿ ಹೊಳಿ, ಮಧುಗಿರಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಕೋಲಾರದಲ್ಲಿ ದಲಿತ ನಾಯಕ ಮುನಿಯಪ್ಪ ಸೋಲಿಸಬೇಕು ಎಂದು ಬಹಿರಂಗ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತು ಮಂಡ್ಯದಲ್ಲಿ ಪಕ್ಷೇತರ ಸುಮಲತಾ ಅವರ ಜೊತೆ ಸಭೆಯಲ್ಲಿ ಭಾಗವಹಿಸಿದ್ದು, ಅವರ ಪರ ಪ್ರಚಾರ ಮಾಡಿದ್ದ ಕಾಂಗ್ರೆಸ್ ನಾಯಕರುಗಳು ಉಪ್ಪು ತಿಂದಿಲ್ಲವೇ, ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ರೋಷನ್‍ಬೇಗ್ ಪ್ರಶ್ನಿಸಿದರು.


ಸಂಬಂಧಿತ ಟ್ಯಾಗ್ಗಳು

Roshan baig Siddaramaih Congress MLA


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ