ಬೆಂಗಳೂರಿಗರಿಗೆ ಕಾಡುತ್ತಿರುವ ವಿಚಿತ್ರ ಜ್ವರ

unidentified fever in bengaluru

19-06-2019

ಬೆಂಗಳೂರು; ನಗರದಲ್ಲಿ ಕಳೆದ ಎರಡು ವರ್ಷಗಳಿಂದ 3.5 ಲಕ್ಷ ಜನರು ಗುರುತಿಸಲಾರದ ಜ್ವರದಿಂದ ಬಳಲುತ್ತಿರುವ ಕುರಿತು ಬಿಬಿಎಂಪಿ ನಡೆಸಿರುವ ಸಮೀಕ್ಷೆಯಿಂದ ಬಹಿರಂಗಗೊಂಡಿದ್ದು ಆತಂಕಕ್ಕೆ ಕಾರಣವಾಗಿದೆ

ಜ್ವರದಿಂದ ಬಳಲುತ್ತಿರುವ ರೋಗಿಗಳ ದೇಹದ ತಾಪಮಾನ 101 ಡಿಗ್ರಿಯಷ್ಟಿದ್ದು, ಮೂರು ವಾರಗಳವರೆಗೂ ಈ ಜ್ವರ ರೋಗಿಗಳನ್ನು ಎಡಬಿಡದೆ ಕಾಡಲಿದೆ. ಆದರೆ, ಈ ರೋಗಕ್ಕೆ ಕಾರಣವಾಗುವ ಅಂಶಗಳೇನು ಎನ್ನುವುದನ್ನು ಇದುವರೆಗೂ ದೃಢಪಡಿಸಲಾಗಿಲ್ಲದಿರುವುದನ್ನು ನೋಡಿದರೆ ಆತಂಕ ಹೆಚ್ಚುವಂತೆ ಮಾಡಿದೆ.

2017ರಲ್ಲಿ ಬೆಂಗಳೂರಿನಲ್ಲಿ 1,57,881 ಜನ ಈ ಜ್ವರ ಕಾಣಿಸಿಕೊಂಡಿದೆ. 2018ರಲ್ಲಿ 1,42,860, 2019ರಲ್ಲಿ 50,062 ಜನ ಸೇರಿದಂತೆ ಒಟ್ಟು 3 ವರ್ಷಗಳಲ್ಲಿ 3.5 ಲಕ್ಷಕ್ಕೂ ಅಧಿಕ ಜನ ಈ ಜ್ವರದಿಂದ ಬಳಲುತ್ತಿದ್ದಾರೆ.

ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಸ್ಪತ್ರೆಗಳಲ್ಲಿ ಬಿಬಿಎಂಪಿ ಸಮೀಕ್ಷೆ ನಡೆಸಿ, 450 ಆಸ್ಪತ್ರೆಗಳಿಂದ ಮಾಹಿತಿ ಸಂಗ್ರಹಿಸಿದೆ. 85 ಪ್ರಾಥಮಿಕ ಚಿಕಿತ್ಸಾ ಕೇಂದ್ರ ಹಾಗೂ 30 ಹೆರಿಗೆ ಆಸ್ಪತ್ರೆಗಳನ್ನು ಸಮೀಕ್ಷೆ ನಡೆಸಲಾಗಿದೆ.

ಟಯ್‍ಫಾಯಿಡ್, ಕಾಲರಾ, ಡೆಂಗೆ ಹಾಗೂ ಇತರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಜ್ವರ ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದು, ಈ ಜ್ವರ ನಿಧಾನವಾಗಿ ಕ್ಷಯರೋಗವೂ ಬರಬಹುದೆಂದು ತಿಳಿದು ಬಂದಿದೆ. ವಾರಗಳ ಕಾಲ ರೋಗಿಯನ್ನು ಆಸ್ಪತ್ರೆಯಲ್ಲೇ ನಿಗಾದಲ್ಲಿರಿಸಿ ಪರೀಕ್ಷೆಗಳನ್ನು ನಡೆಸಿದರೆ ಈ ಜ್ವರದ ಮೂಲ ಪತ್ತೆ ಹಚ್ಚಬಹುದೆಂದು ವೈದ್ಯರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

bbmp bengaluru unidentified fever helath


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ