ರೈತರಿಗೆ ತೊಂದರೆ ಕೊಡುತ್ತಿದ್ದರೆ, ಮಾಹಿತಿ ಪಡೆದು ಮುಂದಿನ ಕ್ರಮ !

Kannada News

09-06-2017

ಬೆಂಗಳೂರು:- ತಮಿಳುನಾಡಿನ ಈರೋಡಿನಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ ರೈತರನ್ನು ಬಂಧಿಸಿರುವ ವಿಚಾರದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.  ಈ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ರೈತರನ್ನು ಬಂಧಿಸಿ ತೊಂದರೆ ಕೊಡುತ್ತಿದ್ದರೆ. ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ. ಆ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇನೆ ಎಂದರು. ಮಹಾದಾಯಿ ಮತ್ತು  ಕಳಸಾ ಬಂಡೂರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರೈತರಿಗೆ ಸಂಬಂಧಪಟ್ಟ ಎಲ್ಲ ಕೇಸ್ ಗಳನ್ನ ನಮ್ಮ ಸರ್ಕಾರ ವಾಪಸ್ ಪಡೆಯಲಿದೆ. ಕಾವೇರಿ, ಮಹಾದಾಯಿ, ಕಳಸಾ ಬಂಡೂರಿ ಹೋರಾಟ ಸೇರಿದಂತೆ ಎಲ್ಲ ರೈತರ ಮೇಲಿನ ಕೇಸ್ ವಾಪಸ್ ಪಡೆಯಲು ಚರ್ಚೆ ನಡೆದಿದೆ. ಮತ್ತು ಕ್ರಿಮಿನಲ್ ಕೇಸ್ ದಾಖಲಾಗಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮಹಾದಾಯಿ ಹೋರಾಟದ ವೇಳೆ ಸರ್ಕಾರಿ ಬಸ್ ಗೆ ಬೆಂಕಿ ಇಡಲಾಗಿದೆ. ಈ ಸಂದರ್ಭದಲ್ಲಿ ಕೆಲವರು ರೈತರು ಅಲ್ಲದವರು ಗಲಾಟೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಅನಿವಾರ್ಯ ಎಂದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ