ಪುಟ್ಟ ಕರುಗಳನ್ನು ಯೂರಿಯಾ ಚೀಲದಲ್ಲಿ ತುಂಬಿ ಸಾಗಾಟ

cattle transport

19-06-2019

ಬೆಂಗಳೂರು: ಬಿಡದಿಯ ಬಳಿ ಯೂರಿಯಾ ಚೀಲದಲ್ಲಿ ಕಟ್ಟಿಕೊಂಡು ಆಟೋದಲ್ಲಿ ಸಾಗಿಸುತ್ತಿದ್ದ ಕರುಗಳನ್ನು ವಶಪಡಿಸಿಕೊಂಡಿರುವ ಬಿಡದಿ ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ.

ಬಿಡದಿಯ ಬಳಿ ಪುಟ್ಟ ಕರುಗಳನ್ನು ಯೂರಿಯಾ ಚೀಲದಲ್ಲಿ ತುಂಬಿ ಸಾಗಾಟ ಮಾಡುತ್ತಿರುವುದನ್ನು ಕಂಡ ಸ್ಥಳೀಯರು ಆಟೋ ಅಡ್ಡಗಟ್ಟಿ ಪರಿಶೀಲಿಸಿದಾಗ ಚೀಲಗಳೊಳಗೆ ಕರುಗಳು ಒದ್ದಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಚೀಲಗಳನ್ನು ಆಟೋದಿಂದ ಇಳಿಸಿ ಕಟ್ಟಿದ ಹಗ್ಗವನ್ನು ಬಿಚ್ಚಿದಾಗ ಕರುಗಳು ಹೊರಬಂದವು.

ಈ ದೃಶ್ಯ ನೆರೆದಿದ್ದವರಲ್ಲಿ ಕಣ್ಣೀರು ತರಿಸುವಂತಿತ್ತು. ಆರೋಪಿ ಆಟೋದಲ್ಲಿ ಸುಮಾರು 10-15 ಕರುಗಳನ್ನು ತುಂಬಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾನೆ. ಕರುಗಳು ಒದ್ದಾಡುತ್ತವೆ ಎನ್ನುವ ಕಾರಣಕ್ಕೆ ಅವುಗಳ ಕಾಲುಗಳನ್ನು ಮುರಿದು ಚೀಲದೊಳಗೆ ತುಂಬಿಸಿದ್ದಾನೆ.

ಬಳಿಕ ಉಸಿರಾಡಲೆಂದು ಗೋಣಿಯಲ್ಲಿ ಒಂದು ಸಣ್ಣ ರಂಧ್ರ ಮಾಡಿ, ಚೀಲವನ್ನು ಬಿಗಿಯಾಗಿ ಕಟ್ಟಿದ್ದಾನೆ.ಸುದ್ದಿ ತಿಳಿದ ತಕ್ಷಣ ಬಿಡದಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಕರುಗಳನ್ನು ರಕ್ಷಿಸಿ ಆಟೋ ಚಾಲಕನನ್ನು ಬಂಧಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

cattle police slaughter bidadi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ