ಶಾಲಾ ಬಸ್ ಡಿಕ್ಕಿ: 6 ವರ್ಷದ ಬಾಲಕ ಸಾವು

Student dies in school bus accident

18-06-2019

ಬೆಂಗಳೂರು, ಜೂ. 18- ಶಾಲಾ ಬಸ್‍ಗೆ ಸಿಕ್ಕಿ 6 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ದುರ್ಘಟನೆ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ರಾಜರಾಜೇಶ್ವರಿ ನಗರದ ರಾಜೇಶ್ ಅವರ ಪುತ್ರ ಚಿಂತನ್ ರಮೇಶ್ ಮಗದಂ ಮೃತ ಬಾಲಕನಾಗಿದ್ದಾನೆ. ಸ್ವರ್ಗರಾಣಿ ಸ್ಕೂಲ್‍ನಲ್ಲಿ 1ನೇ ತರಗತಿ ಓದುತ್ತಿದ್ದ ಚಿಂತನ್ ರಮೇಶ್, ನಿನ್ನೆ ಮಧ್ಯಾಹ್ನ 3.30ರ ವೇಳೆ ಶಾಲೆ ಮುಗಿಸಿಕೊಂಡು ಶಾಲೆಯ ಬಸ್‍ನಲ್ಲಿ ಹತ್ತಿರದ ಡೇ-ಕೇರ್‍ಗೆ ಬರುತ್ತಿದ್ದ. ಡೇ-ಕೇರ್ ಬಳಿ ಬಸ್ ನಿಲ್ಲಿಸಿದ ಚಾಲಕ ಸುರೇಶ್, ಮಗು ಹಿಂದೆ ಹೋಗುತ್ತಿದೆ ಎಂದು ತಿಳಿದು, ಮುಂದೆ ಬಸ್ ಚಲಾಯಿಸಿದ್ದಾನೆ. ಆದರೆ, ಚಿಂತನ್ ಮುಂದೆ ಹೋಗುತ್ತಿದ್ದರಿಂದ ಚಕ್ರಕ್ಕೆ ಸಿಲುಕಿ ಮೃತಪಟ್ಟಿದೆ.

ಪ್ರಕರಣ ದಾಖಲಿಸಿರುವ ಕೆಂಗೇರಿ ಸಂಚಾರ ಪೊಲೀಸರು ಚಾಲಕ ಸುರೇಶ್‍ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Accident Kengeri School Bus Student


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ