ರಾಜ್ಯದ ಪ್ರತೀ ಮನೆಗೆ ಕುಡಿಯುವ ನೀರು : ಸಿ.ಎಂ

Drinking water

18-06-2019

ಬೆಂಗಳೂರು: ರಾಜ್ಯದ ಪ್ರತೀ ಮನೆಗಳಿಗೆ `ಜಲಧಾರೆ' ಯೋಜನೆ ಮೂಲಕ ಕುಡಿಯುವ ನೀರು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜನತಾ ದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮನೆ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು ಒದಗಿಸಲಾಗುವುದು ಎಂದು ಹೇಳಿದರು. ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ಭಾಗಗಳ ಕೆರೆಗಳಿಗೆ ಶಾಶ್ವತ ನೀರು ತುಂಬಿಸುವ ಯೋಜನೆ ಜಾರಿಗೆಗೊಂಡಿದ್ದು ಸುಮಾರು 548 ಕೋಟಿ ರೂಗಳ ವೆಚ್ಚದಲ್ಲಿ ಕಾವೇರಿ ನದಿ ಮೂಲದಿಂದ ಇಗ್ಗಲೂರು ಬ್ಯಾರೇಜ್ಗೆ ನೀರು ಹರಿಸಿ, ಕಣ್ವ, ವೈಜಿ ಗುಡ್ಡ, ಮಂಚನಬೆಲೆ ಜಲಾಶಯಗಳಿಗೆ ನೀರು ಹರಿಸಿ ಕೆರೆಗಳಿಗೆ ನೀರು ತುಂಬುವ ಶಾಶ್ವತ ಯೋಜನೆ ಜಾರಿಗೊಂಡಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

Drinking water Janata Darshana HD Kumaraswamy Jaladhare


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ