ಕಣ್ಣಿಗೆ ಖಾರದಪುಡಿ ಎರಚಿ ಹಣ ದೋಚಿದ್ದ ಕಳ್ಳರ ಬಂಧನ !

Kannada News

09-06-2017

ಬೆಳಗಾವಿ:- ಕಣ್ಣಿಗೆ ಖಾರದಪುಡಿ ಎರಚಿ ಹಣ ದೋಚಿದ್ದ ಕಳ್ಳರನ್ನು ಬಂಧಿಸುವಲ್ಲಿ ಬೆಳಗಾವಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೂನ್ 1 ರಂದು ಅನೀಲ್ ಪೋರವಾಲ್ ಎಂಬ ವ್ಯಕ್ತಿಗೆ ಖಾರದಪುಡಿ ಎರಚಿ 9.88 ಲಕ್ಷ ರೂಪಾಯಿ ದೋಚಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು  5 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಕಿರಣ ಮದನ್ನವರ(27), ರವಿ ತಳವಾರ(28), ಜೋತಿಬಾ ಹಂಚಿನಮನಿ(22), ಅನೀಲ್ ಪಡೆಣ್ಣವರ(19), ರಾಜೇಶ ವರೂರ(19) ಬಂಧಿತರು. ಇನ್ನೊಬ್ಬ ಆರೋಪಿಯಾದ ಮಲ್ಲೇಶ ಬುಡ್ರಿ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳು ಬೆಳಗಾವಿ ಮೂಲದವರಾಗಿದ್ದಾರೆ, ಕಡೆಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ