ಓಂ ಬಿರ್ಲಾ ಲೋಕಸಭೆ ಸ್ಪೀಕರ್ ಅಭ್ಯರ್ಥಿ

Om Birla is Loksbhe Speaker Candidate

18-06-2019

ದೆಹಲಿ: ಪ್ರಧಾನಿ, ರಕ್ಷಣಾ ಸಚಿವರು, ಗೃಹ ಸಚಿವರು, ಸಾರಿಗೆ ಸಚಿವರು ಓಂ ಬಿರ್ಲಾ ಅವರನ್ನು ಲೋಕಸಭೆ ಸ್ಪೀಕರ್ ಅಭ್ಯರ್ಥಿಯಾಗಿಸಲು ಸೂಚಿಸಿದ್ದಾರೆ. ಬಿಜು ಜನತಾದಳ, ನ್ಯಾಷನಲ್ ಪೀಪಲ್ಸ್ ಪಾರ್ಟಿ, ಮಿಜೋ ನ್ಯಾಷನಲ್ ಫ್ರಂಟ್, ಅಕಾಲಿ ದಳ, ಲೋಕ ಜನಶಕ್ತಿ ಪಾರ್ಟಿ, ವೈಎಸ್‍ಆರ್‍ಸಿಪಿ, ಎಐಎಡಿಎಂಕೆ ಮತ್ತು ಅಪ್ನಾದಳಗಳು ಈ ಪ್ರಸ್ತಾವನೆಗೆ ಸಹಿ ಹಾಕಿವೆ ಎಂದು ಬಿಜೆಪಿ ನಾಯಕ ಪ್ರಲ್ಹಾದ್ ಜೋಷಿ ಹೇಳಿದರು. ಅಲ್ಲದೇ, ನಾವು ಕಾಂಗ್ರೆಸ್ ಜೊತೆಗೆ ಮಾತನಾಡಿದ್ದೇವೆ. ಇದುವರೆಗೆ ಅವರು ಈ ಪ್ರಸ್ತಾವನೆಗೆ ಸಹಿ ಹಾಕಿಲ್ಲ. ವಿರೋಧವನ್ನೂ ವ್ಯಕ್ತಪಡಿಸಿಲ್ಲ. ನಾನು ಗುಲಾಂ ನಬಿ ಆಜಾದ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ ಎಂದರು.


ಸಂಬಂಧಿತ ಟ್ಯಾಗ್ಗಳು

Om Birla Prahlad Joshi Loksbhe Speaker Candidate


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ