ಮೊಬೈಲ್ ಅಂಗಡಿಯಲ್ಲಿ ಕಳ್ಳತನ !

Kannada News

09-06-2017

ಬೆಂಗಳೂರು :- ಮೊಬೈಲ್ ಅಂಗಡಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ನಗರದ ಮೊಬೈಲ್ ಅಂಗಡಿ ಯೊಂದರಲ್ಲಿ 50 ಕ್ಕೂ ಹೆಚ್ಚು ಮೊಬೈಲ್ ಗಳನ್ನು ಕಳವು ಮಾಡಿದ್ದಾರೆ. ಲಗ್ಗೆರೆ ಮುಖ್ಯರಸ್ತೆಯಲ್ಲಿರುವ ಕಾವೇರಿ ಮೊಬೈಲ್ಸ್ ಎಂಬ, ಮೊಬೈಲ್ ಅಂಗಡಿಯಲ್ಲಿ  ಘಟನೆ ನಡೆದಿದೆ. ನಿನ್ನೆ ರಾತ್ರಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳಿಂದ ೫೦ಕ್ಕೂ ಹೆಚ್ಚು ಮೊಬೈಲ್ ಮತ್ತು ೧೮ ಸಾವಿರ ನಗದು ಹಣವನ್ನು ಕಳ್ಳರು ತೆಗೆದುಕೊಂಡು ಪರಾರಿಯಾಗಿದ್ದಾರೆ. ಲಗ್ಗೆರೆ ಮುಖ್ಯರಸ್ತೆಯ ಕಾವೇರಿ ಮೊಬೈಲ್ಸ್ ಅಂಗಡಿಯಲ್ಲಿ ಮಾತ್ರವಲ್ಲದೆ ,ಈ ಹಿಂದೆಯೂ ಇದೇ ರಸ್ತೆಯಲ್ಲಿ ಸರಣಿ ಕಳ್ಳತನವಾಗಿದ್ದು, ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ