ಮೇಲ್ಛಾವಣಿ ಕುಸಿದು ಮೂವರು ಕಾರ್ಮಿಕರ ಸಾವು

Labors Death

17-06-2019

ಬೆಂಗಳೂರು: ಹೆಬ್ಬಾಳ ರಿಂಗ್ ರಸ್ತೆ ಬಳಿಯ ಲುಂಬಿನಿ ಗಾರ್ಡನ್ ಬಳಿ ಸೋಮವಾರ ಮಧ್ಯಾಹ್ನ ನಿರ್ಮಾಣ ಹಂತದ ನೀರು ಶುದ್ಧೀಕರಣ ಘಟಕದ ಮೇಲ್ಛಾವಣಿ ದಿಢೀರ್ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಲೇಔಟ್‍ನಲ್ಲಿ ಜಲಮಂಡಳಿ ನಿರ್ಮಿಸುತ್ತಿರುವ ನೀರು ಶುದ್ಧೀಕರಣ ಘಟಕದ ಮೇಲ್ಛಾವಣಿಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತಿದ್ದಾಗ ಹಠಾತ್ ಮೇಲ್ಛಾವಣಿ ಕುಸಿದು ಈ ದುರ್ಘಟನೆ ಸಂಭವಿಸಿದೆ.

ಕಾಮಗಾರಿಯಲ್ಲಿ ತೊಡಗಿದ್ದ ಸುಮಾರು 30 ಮಂದಿ ಘಟಕದಡಿ ಸಿಲುಕಿದ್ದು, ಅವರಲ್ಲಿ ಕೃಷ್ಣ ಸೇರಿ ಮೂವರು ಮೃತಪಟ್ಟಿದ್ದು, 25 ಮಂದಿಯನ್ನು ರಕ್ಷಿಸಲಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗ್ಯಾಸ್ ಕಟ್ಟರ್ ಬಳಸಿ ಕಂಬಿಗಳನ್ನು ಕತ್ತರಿಸಿ ಒಳಗಡೆ ಸಿಲುಕಿರುವವರನ್ನು ರಕ್ಷಿಸಿ, ಜಾಗೃತ ಸ್ಥಿತಿಯಲ್ಲಿದ್ದ 6 - 7 ಆಂಬ್ಯುಲೆನ್ಸ್‍ಗಳಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಸೆಂಟ್ರಿಂಗ್ ಸರಿಯಾಗಿ ಅಳವಡಿಸದಿರುವುದು, ಸರಿಯಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು, ಕುಸಿತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಕಳೆದ ಹಲವು ದಿನಗಳಿಂದ ನೀರು ಶುದ್ಧೀಕರಣ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಬಹುತೇಕ ಕೊನೆಯ ಹಂತಕ್ಕೆ ಬಂದಿದ್ದ ಕಾಮಗಾರಿಯ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾಮಗಾರಿಯಲ್ಲಿ ತೊಡಗಿದ್ದವರೆಲ್ಲರೂ, ಉತ್ತರ ಭಾರತದ ಕೊಲ್ಕತ, ಬಿಹಾರ ಹಾಗೂ ಇನ್ನಿತರ ರಾಜ್ಯಗಳಿಗೆ ಸೇರಿದ ಕೂಲಿಕಾರ್ಮಿಕರಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Labor Hebbala Death Lumbini Garden


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ