ವಂಚಕ ಮನ್ಸೂರ್ ಮಾಜಿ ಪತ್ನಿಯ ಲ್ಯಾಪ್ಟಾಪ್ ವಶ

IMA Cheating Case

17-06-2019

ಬಹುಕೋಟಿ ವಂಚಕ ಐಎಂಎ ಕಂಪನಿಯ ಮಾಲೀಕ ಮಹಮದ್ ಮನ್ಸೂರ್ ಖಾನ್‍ನ ಮಾಜಿ ಪತ್ನಿಯ ಮನೆಯ ಮೇಲೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಾಜಿನಗರದ ವೆಂಕಟಪ್ಪ ರಸ್ತೆಯಲ್ಲಿನ ಮನ್ಸೂರ್ ಖಾನ್‍ನ ಮಾಜಿ ಪತ್ನಿ ತುಬಸಮ್ ಮನೆ ಮೇಲೆ ಏಳುಮಂದಿ ಎಸ್‍ಐಟಿ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಮೂರು ತಿಂಗಳ ಹಿಂದೆ ಮಹಮದ್ ಮನ್ಸೂರ್‍ನ ಮಾಜಿ ಪತ್ನಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದು, ಇದರ ಮಾಹಿತಿ ತಿಳಿದ ಎಸ್‍ಐಟಿ ಅಧಿಕಾರಿಗಳು ದಾಳಿ ನಡೆಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಮಹಮದ್ ಮನ್ಸೂರ್‍ಗೆ ನಾಲ್ವರು ಪತ್ನಿಯರಿದ್ದು, ಅವರಲ್ಲಿ ಒಬ್ಬಾಕೆ ಮಾತ್ರ ಆತನ ಜೊತೆ ಪರಾರಿಯಾಗಿದ್ದು, ಉಳಿದವರಿಗಾಗಿ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mansoor Cheating Case IMA SIT


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ