ಐಎಂಎ ಹೂಡಿಕೆದಾರರ ಹಿತಾಸಕ್ತಿ ಕಾಪಾಡಲು ಹೈಕೋರ್ಟ್ ಸೂಚನೆ

IMA Cheating case: High court instruction to government

17-06-2019

ಬೆಂಗಳೂರು, ಜೂ. 17- ಐಎಂಎ ವಂಚನೆ ಪ್ರಕರಣದ ತನಿಖೆಯ ಪ್ರಗತಿಯ ವಿವರವನ್ನು ನೀಡಿ ಹೂಡಿಕೆದಾರರ ಹಿತಾಸಕ್ತಿ ಕಾಪಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಐಎಂಎ, ಆಂಬಿಡೆಂಟ್ ಮತ್ತಿತರ ವಂಚನೆ ಪ್ರಕರಣಗಳ ಸಂಬಂಧ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಸಿ.ಎಸ್. ಓಕಾ ಅವರು ಐಎಂಎ ತನಿಖೆಯ ಪ್ರಗತಿಯ ವಿವರವನ್ನು ನೀಡುವಂತೆ ಕೇಳಿದರು.

ವಂಚನೆ ಪ್ರಕರಣದ ಸಂಬಂಧ ನೀವು ಯಾವ ರೀತಿಯ ತನಿಖೆ ನಡೆಸುತ್ತೀರೋ ತಿಳಿಯುತ್ತಿಲ್ಲ. ಜಾರಿ ನಿರ್ದೇಶನಾಲಯ ಹಾಗೂ ಎಸ್‍ಐಟಿ ಸಂಸ್ಥೆಗಳ ನಡುವೆ ಸಮನ್ವಯವಿರಬೇಕು. ತನಿಖೆ ಯಾವ ಹಂತದಲ್ಲಿ ಇದೆ ಎನ್ನುವುದನ್ನು ನ್ಯಾಯಾಲಯಕ್ಕೆ ತಿಳಿಸುವಂತೆ ಆದೇಶಿಸಿದರು.

ಐಎಂಎ ಪ್ರಕರಣದ ಸಂಬಂಧ ತನಿಖೆ ನಡೆಯುತ್ತಿದ್ದು, ಕಾಲಾವಕಾಶ ನೀಡುವಂತೆ ಸರ್ಕಾರಿ ವಕೀಲರು, ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿದರು. ಈ ವೇಳೆ ಐಎಂಎಯ ತನಿಖೆಯು ಯಾವ ಹಂತದಲ್ಲಿದೆ, ಯಾವ ಯಾವ ಪ್ರಕರಣಗಳನ್ನು ದಾಖಲಿಸಿದ್ದೀರ, ಹೂಡಿಕೆದಾರರ ಹಿತಾಸಕ್ತಿಗೆ ಕೈಗೊಂಡ ಕ್ರಮಗಳ ವಿವರ ನೀಡುವಂತೆ ನ್ಯಾಯಮೂರ್ತಿಗಳು ಸೂಚನೆ ನೀಡಿದರು.

ಐಎಂಎ ವಂಚನೆ ಸಂಬಂಧ ಈಗಾಗಲೇ ಜಾರಿ ನಿರ್ದೇಶನಾಲಯದ ತನಿಖೆ ಪ್ರಗತಿಯಲ್ಲಿದೆ. ಸದ್ಯದಲ್ಲೇ ವಿವರ ನೀಡುವುದಾಗಿ ಇಡಿ ಪರ ವಕೀಲರು ನ್ಯಾಯಮೂರ್ತಿಗಳಿಗೆ ತಿಳಿಸಿದ್ದು, ವರದಿಗೆ ಕಾಲಾವಕಾಶ ನೀಡಿ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದರು.


ಸಂಬಂಧಿತ ಟ್ಯಾಗ್ಗಳು

IMA Investment Highcourt Cheating case


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ