3 ದಶಕಗಳ ನಂತರ ಮನಮೋಹನ್ ಸಿಂಗ್ ಇಲ್ಲದ ಅಧಿವೇಶನ

Session 2019

17-06-2019

ದೆಹಲಿ:3 ದಶಕಗಳ ನಂತರ ಮಾಜಿ ಪ್ರಧಾನಿ ಮತ್ತು ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಇಲ್ಲದ ಬಜೆಟ್ ಅಧಿವೇಶನ ಈ ಬಾರಿ ನಡೆಯಲಿದೆ. ಪ್ರಧಾನಿನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದೆ.  

ಅಸ್ಸಾಂನಿಂದ ಸತತ 28 ವರ್ಷಗಳ ಕಾಲ ರಾಜ್ಯಸಭೆ ಸದಸ್ಯರಾಗಿದ್ದ ಮನಮೋಹನ್ ಸಿಂಗ್ ಅವರ ಅವಧಿ ಇದೇ ಶುಕ್ರವಾರ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿಅವರು ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಸದಸ್ಯರಾಗಿ ಭಾಗವಹಿಸಲು ಸಾಧ್ಯವಿಲ್ಲದಂತಾಗಿದೆ. 2008ರಲ್ಲಿ ಜಾಗತಿಕ ಹಣದುಬ್ಬರದ ಸಮಯದಲ್ಲಿ ಭಾರತವನ್ನುಆರ್ಥಿಕ ಸಂಕಷ್ಟದಿಂದ ಪಾರುಮಾಡಿದ ಕೀರ್ತಿ ಮನಮೋಹನ್ ಸಿಂಗ್ ಅವರದು. ಈ ಅವಧಿಯ ಬಜೆಟ್ ಅಧಿವೇಶನದಲ್ಲಿ ಅವರ ಅನುಭವದ ಲಾಭ ಸಂಸದರಿಗೆಸಿಗದಂತಾಗಿದೆ.

1991ರಲ್ಲಿ ಅಸ್ಸಾಂನಿಂದ ಲೋಕಸಭೆ ಪ್ರವೇಶಿಸಲು ಯತ್ನಿಸಿದ್ದ ಮನಮೋಹನ್ ಸಿಂಗ್ ವಿಫಲರಾಗಿದ್ದರು. ನಂತರ ಸತತವಾಗಿ ಅವರನ್ನು ಕಾಂಗ್ರೆಸ್ ಅಸ್ಸಾಂನಿಂದರಾಜ್ಯಸಭೆಗೆ ಆಯ್ಕೆ ಮಾಡಿತ್ತು. ಆದರೆ, ಇದೀಗ ಅಸ್ಸಾಂನಲ್ಲಿ ಕಾಂಗ್ರೆಸ್‍ನ ಬಲ ಕೇವಲ 25 ಶಾಸಕರಿಗೆ ಸೀಮಿತವಾಗಿದ್ದು, ಗೆಲ್ಲಲು ಅಗತ್ಯವಿರುವ ಮೊದಲಪ್ರಾಶಸ್ತ್ಯದ ಸಂಖ್ಯೆ 43ನ್ನು ಪಡೆಯಲು ವಿಫಲವಾಗಿದೆ. ಇನ್ನು ಎಐಯುಡಿಯ 13 ಸದಸ್ಯರ ಬೆಂಬಲ ಪಡೆದರೂ ಅಗತ್ಯ ಸಂಖ್ಯೆಗೆ 5 ಶಾಸಕರ ಕೊರತೆಯನ್ನುಕಾಂಗ್ರೆಸ್ ಎದುರಿಸುತ್ತಿದೆ.

ಗುಜರಾತ್ ಹೊರತುಪಡಿಸಿ ಇನ್ನಾವುದೇ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಮೇಲ್ಮನೆಗೆ ಕಳುಹಿಸುವಷ್ಟು ಶಾಸಕರ ಬಲ ಇಲ್ಲ. ಕರ್ನಾಟಕ, ಛತ್ತೀಸ್‍ಘಡ, ರಾಜಸ್ಥಾನ, ಪಂಜಾಬ್ ರಾಜ್ಯಗಳಲ್ಲಿ ಸದ್ಯಕ್ಕೆ ರಾಜ್ಯಸಭೆ ಸ್ಥಾನಗಳು ಖಾಲಿ ಇಲ್ಲ.

ಪ್ರಸ್ತುತ ರಾಜ್ಯಸಭೆಯಲ್ಲಿ ಒಟ್ಟು 9 ಸದಸ್ಯರ ಸ್ಥಾನಗಳು ಖಾಲಿ ಇದ್ದು, ಒಡಿಶಾದಿಂದ 4, ತಮಿಳುನಾಡಿನಿಂದ 1, ಬಿಹಾರದಿಂದ 2 ಮತ್ತು ಗುಜರಾತ್‍ನಿಂದ 2 ಸದಸ್ಯರು ಆಯ್ಕೆಯಾಗಬಹುದಾಗಿದೆ. ತಮಿಳುನಾಡಿನಲ್ಲಿ ಡಿಎಂಕೆ ಬೆಂಬಲದೊಂದಿಗೆ ಮನಮೋಹನ್ ಸಿಂಗ್ ಅವರನ್ನು ರಾಜ್ಯಸಭೆಗೆ ಕಳುಹಿಸುವ ಚಿಂತನೆಯನ್ನುಕಾಂಗ್ರೆಸ್ ನಡೆಸಿದೆ.

ತಮ್ಮ ರಾಜ್ಯಸಭೆಯ ಸುದೀರ್ಘ ಅವಧಿಯಲ್ಲಿ ಅವರು ಮೇಲ್ಮನೆಯ ನಾಯಕರಾಗಿ 2004-2014ರ ವರೆಗೆ ಸೇವೆ ಸಲ್ಲಿಸಿದ್ದಾರೆ. ಸತತ ಎರಡು ಅವಧಿಗೆ 2003-2013ರವರೆಗೆ ಪ್ರಧಾನಿಯಾಗಿದ್ದರು. 


ಸಂಬಂಧಿತ ಟ್ಯಾಗ್ಗಳು

Manamohan Singh Delhi Session Prime minister


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ