ಜನಪರ ನಿರ್ಧಾರಕ್ಕೆ ಬೆಂಬಲ ನೀಡಿ: ಮೋದಿ

narendra modi first session of 17th loksabha

17-06-2019

ದೆಹಲಿ: ಪ್ರಜಾಪ್ರಭುತ್ವದಲ್ಲಿ ಇರುವುದು, ವಿಪಕ್ಷಗಳು ಸಕ್ರಿಯವಾಗಿರುವುದು, ವಿಪಕ್ಷಗಳು ಸಮರ್ಥವಾಗಿರುವುದು ಅನಿವಾರ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಹೇಳಿದರು. ಸತತ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನಕ್ಕೂ ಮುನ್ನ ಸುದ್ದಿಗಾರರನ್ನು ಉದ್ದೇಶಿಸಿಮಾತನಾಡಿದ ಅವರು,  ವಿಪಕ್ಷಗಳು ಸಂಖ್ಯೆಯ ವಿಷಯವನ್ನು ಬಿಟ್ಟುಬಿಡಲಿ. ಅವರಿಗೆ ಜನ ಅವರಿಗೆ ಕೊಡಬೇಕಾದಷ್ಟನ್ನು ಕೊಟ್ಟಿದ್ದಾರೆ. ನಮಗೆ ಅವರ ಪ್ರತಿಯೊಂದು ಮಾತುಅಮೂಲ್ಯವಾದುದು. ಅವರ ಪ್ರತಿಯೊಂದು ಭಾವನೆಯೂ ಅಮೂಲ್ಯವಾದುದು. ನಾವು ಸದನದಲ್ಲಿ ಸಂಸದರ ರೂಪದಲ್ಲಿ ಕುಳಿತುಕೊಂಡಾಗ ಪಕ್ಷ, ವಿಪಕ್ಷಗಳಿಗಿಂತ ಹೆಚ್ಚಾಗಿ ನಿಷ್ಪಕ್ಷದಉತ್ಸಾಹಕ್ಕೆ ಮಹತ್ವ ಇದೆ. ನನಗೆ ವಿಶ್ವಾಸವಿದೆ ಪಕ್ಷ-ವಿಪಕ್ಷಗಳ ದಾರಿಯಲ್ಲಿ ಭಿನ್ನವಾಗುವುದರ ಬದಲಾಗಿ, ನಿಷ್ಪಕ್ಷ ಭಾವದಿಂದ ಜನರ ಕಲ್ಯಾಣಕ್ಕಾಗಿ ಪ್ರಾತಿನಿಧ್ಯ ನೀಡುವ ಮೂಲಕಮುಂಬರುವ 5 ವರ್ಷಗಳ ಅವಧಿಯಲ್ಲಿ ಸದನದ ಹಿರಿಮೆಯನ್ನು ಎತ್ತಿ ಹಿಡಿಯಲು ಪ್ರಯತ್ನ ಮಾಡುತ್ತೇವೆ ಎಂದರು. ಎಲ್ಲ ಪಕ್ಷಗಳಿಗೂ ಜನರ ಪರವಾಗಿ ನಿರ್ಧಾರ ತೆಗೆದುಕೊಳ್ಳಲುಬೆಂಬಲ ನೀಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Narendra modi prime minister parliament session opposition


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ