ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

major surgery to police department

17-06-2019

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆದಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಸೇರಿ ಬರೋಬ್ಬರಿ 19 ಮಂದಿ ಐಪಿಎಸ್ ಅಧಿಕಾರಗಳನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅಲೋಕ್ ಕುಮಾರ್ ಅವರನ್ನು ನೇಮಿಸಲಾಗಿದೆ.

ಇಲ್ಲಿಯವರೆಗೆ ನಗರ ಪೊಲೀಸ್ ಆಯುಕ್ತರಾಗಿದ್ದ  ಟಿ.ಸುನಿಲ್ ಕುಮಾರ್ ಅವರನ್ನು ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ನೇಮಿಸಲಾಗಿದೆ
ಅಮ್ರಿತ್ ಪೌಲ್ ರನ್ನು ಪೂರ್ವ ವಲಯ ಐಜಿಪಿ ಆಗಿ ವರ್ಗಾಯಿಸಲಾಗಿದೆ. ಉಮೇಶ್ ಕುಮಾರ್ ರನ್ನು ಬೆಂಗಳೂರು ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ಆಯುಕ್ತರಾಗಿ ನೇಮಿಸಿ ಆದೇಶ ಹೊರಡಿಸಿಲಾಗಿದೆ.
ಹಿರಿಯ ಅಧಿಕಾರಿ ಬಿ.ಕೆ ಸಿಂಗ್  ಗೃಹ ಇಲಾಖೆಯ ಕಾರ್ಯದರ್ಶಿ (PCAS)ಯಾಗಿ ಸೌಮೆಂದು ಮುಖರ್ಜಿ ಅವರನ್ನು  ಆಂತರಿಕ ಭದ್ರತಾ ವಿಭಾಗದ ಐಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ
ರಾಘವೇಂದ್ರ ಸುಹಾಸ್ ಸದರನ್ ಅವರನ್ನು ಉತ್ತರ ವಲಯದ ಐಜಿಪಿ ಆಗಿ ವರ್ಗಾವಣೆ ಮಾಡಲಾಗಿದ್ದು, ರವಿಕಾಂತೆ ಗೌಡ  ಅವರನ್ನು  ಬೆಂಗಳೂರು ನಗರ ಪೊಲೀಸ್ ‌ಅಪರಾಧ ವಿಭಾಗದ  ಮುಖ್ಯಸ್ಥರಾಗಿ ವರ್ಗಾವಣೆ ಮಾಡಲಾಗಿದೆ.
ಅಮಿತ್ ಸಿಂಗ್ ಅವರನ್ನು ನಾಗರಿಕ ರಕ್ಷಣೆ ಮತ್ತು ಹೋಮ್ ಗಾರ್ಡ್ ವಿಭಾಗದ ಎಸ್‍ಪಿ ಆಗಿ ವರ್ಗಾಯಿಸಲಾಗಿದೆ. ರಾಮ್ ನಿವಾಸ್ ಸೆಪಟ್  ಅವರಿಗೆ ಎಸಿಬಿ ಉಎಸ್‍ಪಿ ಆಗಿ,
ಎಂ.ಎನ್ ಅನುಚೇತ್‍ ಅವರನ್ನು ರೈಲ್ವೆ ಎಸ್‍ಪಿ ಆಗಿ ನೇಮಿಸಲಾಗಿದೆ.
ಬಿ.ರಮೇಶ್ ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ಆಗಿ, ರವಿ ಡಿ. ಚನ್ನಣ್ಣನವರ್  ಸಿಐಡಿ ಎಸ್‍ಪಿಯಾಗಿ,  ಡಾ. ಭೀಮಾಶಂಕರ್ ಎಸ್ ಗುಳೇದ್ ಅವರನ್ನು ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ ಯಾಗಿ ನೇಮಿಸಲಾಗಿದೆ
ಸಿ.ಬಿ ರಿಶ್ಯಂತ್ ಅವರನ್ನು ಮೈಸೂರು ಎಸ್‍ಪಿ ಯಾಗಿ, 
ಸುಜೀತಾ ಅವರನ್ನು ಕೆ.ಜಿ.ಎಫ್ ಗೆ ಎಸ್‍ಪಿಯಾಗಿ, ಟಿಪಿ ಶಿವಕುಮಾರ್ ಅವರನ್ನು ಬೆಂಗಳೂರು ಗ್ರಾಮಾಂತರ ಎಸ್‍ಪಿ ಯಾಗಿ, ಎನ್ ವಿಷ್ಣುವರ್ಧನ ಅವರನ್ನು ಬೆಂಗಳೂರು ಅಡಳಿತ ಡಿಸಿಪಿಯಾಗಿ ಮತ್ತು ಕಲಾ ಕೃಷ್ಣ ಸ್ವಾಮಿ ಅವರನ್ನು ಎಫ್‍ಎಸ್‍ಎಲ್ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

police department Police commissione Karnataka IPS reshuffle Alok Kumar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ