ಮೇ 12 ‘ವಿಜಯ್ ಪ್ರಕಾಶ್ ದಿನ’

vijayprakash

17-06-2019

ಖ್ಯಾತ ಗಾಯಕ ವಿಜಯ್ ಪ್ರಕಾಶ್‍ಗೆ ಕರ್ನಾಟಕದಲ್ಲಿ ಹಲವು ಪ್ರಶಸ್ತಿಗಳು ಬಂದಿವೆ. ಅವುಗಳ ಜೊತೆ ಈಗ ಮತ್ತೊಂದು ವಿಶೇಷ ಗೌರವಕ್ಕೆ ಪಾತ್ರರಾಗಿರುವುದು ಕನ್ನಡಿಗರಿಗೆ ಹೆಮ್ಮೆಯವಿಷಯವಾಗಿದೆ. ಕಳೆದ ತಿಂಗಳು ಅವರು ವಿದೇಶದ ಕೆಲವು ಭಾಗಗಳಲ್ಲಿ ಸಂಗೀತ ರಸಮಂಜರಿಯನ್ನು ನಡೆಸಿಕೊಟ್ಟಿದ್ದರು. ಮೇ 12ರಂದು ನಾರ್ಥ್ ಕರೋಲಿನದಲ್ಲಿ ಕಾರ್ಯಕ್ರಮವನ್ನು ನಡೆಸಿದಾಗ ನಮ್ಮವರು ಸೇರಿದಂತೆ ಅಲ್ಲಿನ ಜನರು ಇವರ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದಾರೆ.  ಅದೇ ದಿನದಂದು ಅಮೆರಿಕದ ದಕ್ಷಿಣ ಕರೋಲಿನ ರಾಜ್ಯದ ಕಾನ್‍ಕಾರ್ಡ್ ನಗರದ ಮಹಾಪೌರರಾಗಿರುವ ವಿಲಿಯಮ್.ಸಿ.ಡಷ್ ಇವರ ಬಗ್ಗೆ ಮಾಹಿತಿ ತಿಳಿದು ‘ವಿಜಯ್‍ಪ್ರಕಾಶ್ ದಿನ’ವೆಂದು ಘೋಷಿಸಿ ಪ್ರಮಾಣಪತ್ರ ನೀಡಿದ್ದಾರೆ.

ಇದರಿಂದ ಖುಷಿಯಾಗಿರುವ ವಿಜಯ್‍ಪ್ರಕಾಶ್ ಮುಂದಿನ ವರ್ಷ ಇದೇ ದಿನದಂದು ಏನಾದರೂ ಉತ್ತಮ ಕೆಲಸ ಮಾಡಬೇಕೆಂದು ಯೋಜನೆ ಹಾಕಿಕೊಂಡಿದ್ದಾರೆ. ತಂದೆಯ ಹೆಸರಲ್ಲಿ ಸಂಗೀತ ಶಾಲೆ ತೆರೆಯುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಸದ್ಯ ಸರಿಗಮಪ ಕನ್ನಡ, ತೆಲುಗು, ತಮಿಳು ರಿಯಾಲಿಟಿ ಶೋದಲ್ಲಿ ತೀರ್ಪುಗಾರರಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

vijayprakash singer vijayprakash day music america


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ