ಬಂಗಾಳದಲ್ಲಿದ್ದರೆ ನಮ್ಮ ಭಾಷೆ ಕಲಿಯಬೇಕು: ಮಮತಾ ಬ್ಯಾನರ್ಜಿ

people should learn Begali to be in west Bengal says Mamata byanarjee

15-06-2019

ಪಶ್ಚಿಮ ಬಂಗಾಳದಲ್ಲಿ ವಾಸವಿರುವವರು ಬೆಂಗಾಲಿ ಭಾಷೆಯನ್ನು ಕಲಿಯಲೇಬೇಕು. ಹೊರಗಿನಿಂದ ಬಂದವರು ಇಲ್ಲಿಯವರನ್ನು ಗುರಿಯಾಗಿಸಿಕೊಂಡರೆ ಪರಿಣಾಮ ಸರಿಯಿರದು ಎಂದು ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.

ಪ.ಬಂಗಾಳದ ಕಂಚ್ರಾಪುರದಲ್ಲಿ ಮಾತನಾಡಿರುವ ಅವರು, ನಾನು ಬೇರೆ ರಾಜ್ಯಗಳಿಗೆ ಹೊದಾಗ ಅವರದ್ದೇ ಭಾಷೆ ಮಾತನಾಡುತ್ತೇನೆ. ಹಾಗಾಗಿ ಯಾರಾದರೂ ಇಲ್ಲಿ ವಾಸಿಸುತ್ತಿದ್ದರೆ ಅವರು ಬೆಂಗಾಲಿ ಕಲಿಯಬೇಕು ಎಂದಿದ್ದಾರೆ. ಇದೇ ವೇಳೆ ಕೋಮುವಾದಕ್ಕೆ ಬಿಜೆಪಿಯೇ ಕಾರಣ ಎಂದು ಆರೋಪಿಸಿದರು.

ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ಮಮತಾ ಬ್ಯಾನರ್ಜಿ ಭಾಷೆಯ ದಾಳ ಉರುಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

mamata byanarjee west bengal bengali bjp


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ