ಪುಟ್ಟ ಮಕ್ಕಳಿಗೆ ಕಚಗುಳಿ ಮಾಡೋಡು ಸೇಫ್ ಅಲ್ಲ..!

tickling new born is not safe

15-06-2019

ಮಕ್ಕಳ ನಗು ನೋಡುವುದೆಂದರೆ ಎಲ್ಲರಿಗೂ ಖುಷಿ. ಅವರ ಮುಗ್ಧ ನಗು ಎಲ್ಲರಿಗೂ ಇಷ್ಟ. ಹಾಲುಗಲ್ಲದ, ಬೊಚ್ಚು ಬಾಯಿಯ ಪುಟ್ಟ ಕಂದಮ್ಮ ನಕ್ಕರೆ ಅದನ್ನು ನೋಡುವುದೇ ಚೆಂದ. ಮಕ್ಕಳನ್ನು ಎತ್ತಿಕೊಂಡು ನಗಿಸೋದಕ್ಕೆ ಎಲ್ಲರೂ ಪ್ರಯತ್ನಿಸುತ್ತಾರೆ. ಆದಕ್ಕಾಗಿ ಬಹಳಷ್ಟು ಜನ ಮಕ್ಕಳಿಗೆ ಕಚಗುಳಿ ಮಾಡಿ ನಗಿಸುವುದು ಸಾಮಾನ್ಯ. ಆದರೆ ಹೀಗೆ ಕಚಗುಳಿ ಮಾಡುವುದು ಸರಿಯಲ್ಲ ಎನ್ನುತ್ತದೆ ಅಧ್ಯಯನ.

ಹೌದು.. ಇನ್ನೂ ಮಾಡನಾಡಲು ಬರದ ಮಕ್ಕಳಿಗೆ ಕಚಗುಳಿ ಮಾಡುವುದರಿಂದ ಅವಕ್ಕೆ ನಗುವನ್ನು ನಿಯಂತ್ರಿಸಲು ಆಗುವುದಿಲ್ಲ. ಜೋರಾಗಿ ನಕ್ಕರೂ, ಅದರಿಂದ ನೋವಾಗುತ್ತಿದ್ದರೆ ಅದನ್ನು ಹೇಳಲೂ ಬರುವುದಿಲ್ಲ. ಅಲ್ಲದೇ ನಿಯಂತ್ರಣವಿಲ್ಲದೇ ನಗುವುದರಿಂದ ಉಸಿರಾಟದ ಸಮಸ್ಯೆ ಉಂಟಾಗಬಹುದು. ಕಚಗುಳಿಯಿಂದ ಮಕ್ಕಳ ಮೆದುಳಿಗೂ ಹಾನಿಯಾಗಬಹುದು ಎನ್ನುತ್ತಾರೆ ತಜ್ಞರು.

ಹಳೆಯ ಕಾಲದಲ್ಲಿ ಚೀನಾದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ರೂಪದಲ್ಲಿ ಕಚಗುಳಿ ನೀಡಲಾಗುತ್ತಿತ್ತು. ಅದರಿಂದ ಅಷ್ಟು ನೋವಾಗುತ್ತಿತ್ತೆಂದು ನಾವು ಮನಗಾಣಬಹುದು.

ಹೀಗಾಗಿ ಮಕ್ಕಳಿಗೆ ಮಾತು ಬರೋವರೆಗೂ ಅವಕ್ಕೆ ಕಳಗುಳಿ ಮಾಡದಿರುವುದೇ ಉತ್ತಮ. ಮಕ್ಕಳು ನಕ್ಕರೂ, ಅವರಿಗೆ ಇಷ್ಟವಾದರೂ ಅಥವಾ ಆಗದಿದ್ದರೂ ಕಚಗುಳಿಯಿಡೋದು ಸೇಫ್ ಅಲ್ಲ ಎನ್ನುವುದು ತಜ್ಞರ ಅಭಿಪ್ರಾಯ.


ಸಂಬಂಧಿತ ಟ್ಯಾಗ್ಗಳು

tickling new born babies health


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ