ರೊಲ್ ಕಾಲ್  ಹಣ ನೀಡದಿದ್ದಕ್ಕೆ ಕಾರುಗಳ ಗ್ಲಾಸ್ ಪುಡಿ ಪುಡಿ !

Kannada News

09-06-2017

ಬೆಂಗಳೂರು:- ರೊಲ್ ಕಾಲ್  ಹಣ ನೀಡಲು ನಿರಾಕರಿಸಿದ್ದಕ್ಕೆ ಮನೆ ಮುಂದೆ ನಿಲ್ಲಿಸಿದ ಕಾರುಗಳ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿರುವ ಘಟನೆ ಬೆಂಗಳೂರಿನ ವಿಜಯನಗರದ ನಗರದ ಅಮರಜ್ಯೋತಿ ಬಡಾವಣೆಯಲ್ಲಿ ನಡೆದಿದೆ. ರವಿ ಅಲಿಯಾಸ್ ಗುಂಡ ಎಂಬ ಖೈದಿಯು ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ನಿನ್ನೆ ತಡ ರಾತ್ರಿ 12 ಗಂಟೆ ಸುಮಾರಿನಲ್ಲಿ ಘಟನೆ ನಡೆದಿದೆ. ಮರ್ಡರ್ ಕೇಸ್ ಒಂದರಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ರವಿ, ಜೈಲಿನಲ್ಲಿ  ಇದ್ದುಕೊಂಡು ತನ್ನ ಹುಡುಗರ ಮೂಲಕ ರೋಲ್ ಕಾಲ್  ಗೆ ಪೋನ್ ಮುಖಾಂತರ ೫೦ ಸಾವಿರ ಹಣಕ್ಕಾಗಿ ಸ್ಥಳೀಯರಿಗೆ ಬೇಡಿಕೆ ಮಾಡುತಿದ್ದ, ಹಣ ನೀಡದ ಕಾರಣ ಮನೆ ಮುಂದೆ ನಿಲ್ಲಿಸಿದ ಕಾರುಗಳ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ. ಸ್ಥಳಕ್ಕೆ ವಿಜಯನಗರ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ