ಫ್ಲೋರಿಡಾದಿಂದ ಹವಾಯಿಗೆ ಈ ಹಾವು ಹಾರಿದ್ಹೇಗೆ?

Snake flied from florida to Hawai

14-06-2019

ಹಕ್ಕಿಪಕ್ಷಿಗಳು ಹಾರಿ ಖಂಡಗಳನ್ನು ದಾಟಿ ಮರಿ ಮಾಡಿಕೊಂಡು ಮತ್ತೆ ವಾಪಸ್ ತಮ್ಮ ದೇಶಗಳಿಗೆ ಹೋಗುವ ಕುರಿತು ಕತೆ, ವರದಿಗಳನ್ನು ನೀವೆಲ್ಲ ಕೇಳಿರ್ತೀರಿ. ಆದರೆ, ಇಲ್ಲೊಂದು ಹಾವು ದೇಶ ಬಿಟ್ಟು ದೇಶ ಹಾರಿದ ಕುತೂಹಲಕಾರಿ ಕತೆ ಇದೆ.

ಇದೊಂದು ಚಿಕ್ಕ ಹಾವು. ಅದು ಹೇಗೋ ಫ್ಲೋರಿಡಾದಿಂದ ಹವಾಯಿಗೆ ಹೊರಟಿದ್ದ ಪ್ರಯಾಣಿಕರೊಬ್ಬರ ಬ್ಯಾಗ್ ಸೇರಿಕೊಂಡುಬಿಟ್ಟಿದೆ. ಹವಾಯಿ ಕೃಷಿ ಇಲಾಖೆಯ ಅಧಿಕಾರಿಗಳ ಪ್ರಕಾರ, ಪ್ರಯಾಣಿಕರೊಬ್ಬರ ಬ್ಯಾಗ್‍ನಿಂದ ಪುಟ್ಟ ಹಾವೊಂದು ಇಣುಕಿ ನೋಡುತ್ತಿತ್ತು. ಆದರೆ, ಈ ವೇಳೆ ತಮ್ಮ ಬ್ಯಾಗ್‍ನಲ್ಲಿ ಹಾವಿರುವ ಸಂಗತಿ ಪ್ರಯಾಣಿಕನಿಗೆ ಗೊತ್ತೇ ಇರಲಿಲ್ಲ. ಆಕಸ್ಮಿಕವಾಗಿ ಈ ಪ್ರಯಾಣಿಕನ ಬ್ಯಾಗ್ ಅನ್ನು ಹೊಕ್ಕ ಹಾವು ಹವಾಯಿಗೆ ಉಚಿತವಾಗಿ ಪ್ರಯಾಣ ಮಾಡಿದೆ.

ಹವಾಯಿ ದ್ವೀಪದಲ್ಲಿ ಹಾವುಗಳಿಗೆ ನಿಷೇಧವಿದೆ. ಏಕೆಂದರೆ, ಅಲ್ಲಿ ಅವುಗಳಿಗೆ ಸೂಕ್ತ ಆಹಾರವೇ ಸಿಗುವುದಿಲ್ಲವಂತೆ! ಅಲ್ಲದೇ, ಅಲ್ಲಿನ ಸ್ಥಳೀಯರ ಪ್ರಕಾರ ವನ್ಯಜೀವಿಗಳಿಗೆ ಮತ್ತು ಪರಿಸರಕ್ಕೆ ಹಾವುಗಳು ಬೆದರಿಕೆಯೊಡ್ಡುತ್ತವಂತೆ! ಅದೇನಾದರೂ ಇರಲಿ. ತನಗೆ ಗೊತ್ತಿಲ್ಲದೆ ಹಾವನ್ನು ತಂದ ಪ್ರಯಾಣಿಕನ ಪರಿಸ್ಥಿತಿ ಏನಾಗಿರಬೇಡ ಎಂದು ಆಲೋಚಿಸುತ್ತಿದ್ದೀರಲ್ಲವೇ?

ಹಾವಿನ ಉಚಿತ ಪ್ರಯಾಣದ ಕುರಿತು ಪ್ರತಿಕ್ರಿಯಿಸಿರುವ ಹವಾಯಿ ಅಧಿಕಾರಿಗಳು, ಹಾವನ್ನು ಸಾಗಿಸುವ ಕುರಿತು ಗಂಭೀರ ಪರಿಣಾಮದ ಕುರಿತು ಅವರಿಗೆ ಅರಿವಿಲ್ಲ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಸಮಾಧಾನಕರ ಸಂಗತಿ ಎಂದರೆ, ಪ್ರಯಾಣಿಕನ ಬ್ಯಾಗ್‍ನಲ್ಲಿದ್ದ ಹಾವಿನ ಉದ್ದ ಕೇವಲ 1 ಅಡಿ ಮತ್ತು ಅದು ವಿಷರಹಿತ ಹಾವು. ಇದನ್ನು ಹೊನೊಲುಲುಗೆ ಸ್ಥಳಾಂತರಿಸುವ ಮುನ್ನ ಹವಾಯಿಯ ಕೃಷಿ ಇಲಾಖೆ ವಶಕ್ಕೆ ನೀಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

Florida Snake Hawai Flight


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ