ದೇವಾಲಯದ ಹುಂಡಿ ಕಳವು ಮಾಡುತ್ತಿದ್ದವರ ಬಂಧನ

Temple Theft

14-06-2019

ಬೆಂಗಳೂರು: ದೇವಾಲಯಗಳಿಗೆ ಭಕ್ತರ ಸೋಗಿನಲ್ಲಿ ಹೋಗಿ ಹುಂಡಿಯಲ್ಲಿನ ಹಣ ಅಂದಾಜು ಮಾಡಿ ಕಳವು ಮಾಡುತ್ತಿದ್ದ ಆರು ಮಂದಿ ಅಲೆಮಾರಿಗಳ ಗ್ಯಾಂಗ್‍ನ್ನು ಬಂಧಿಸುವಲ್ಲಿ ಅಮೃತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರು ಮೂಲದ ಕಬ್ಬಾಳು ಅಲಿಯಾಸ್ ಚಂದು (26), ಕುಮಾರ್ ಅಲಿಯಾಸ್ ಬಜಾಕ್ (26), ಮಂಜ (27), ವಿಜಯ್ ಕುಮಾರ್ ಅಲಿಯಾಸ್ ಜೋಗಿ (25), ಬಸವ ಅಲಿಯಾಸ್ ಹರೀಶ್ (37), ಪಿಚ್ಚಗುನ್ನ (25) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಗ್ಯಾಂಗ್‍ನಿಂದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 4.50 ಲಕ್ಷ ರೂ. ನಗದು, 3 ಬೈಕ್, 1 ಲಗೇಜ್ ಆಟೋ ಸೇರಿದಂತೆ, 9.50 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.

ಆರೋಪಿಗಳು ನಗರದ ಹೊರವಲಯದ ಪ್ರದೇಶಗಳಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದು, ಬೆಳಗಿನ ವೇಳೆ ದೇವಾಲಯಕ್ಕೆ ಭಕ್ತರ ಸೋಗಿನಲ್ಲಿ ಹೋಗಿ ಹುಂಡಿಯಲ್ಲಿ ಹಣ ಬೀಳುವುದನ್ನು ಅಂದಾಜು ಮಾಡಿ ರಾತ್ರಿ ವೇಳೆ ದೇವಾಲಯಕ್ಕೆ ನುಗ್ಗಿ ಕಳವು ಮಾಡುತ್ತಿದ್ದರು.

ಆರೋಪಿಗಳ ಬಂಧನದಿಂದ ದೇವನಹಳ್ಳಿಯ 3, ಚಿಕ್ಕಮಗಳೂರು ಜಿಲ್ಲೆಯ 2, ದಾವಣಗೆರೆಯ 1, ದೇವಾಲಯದ ಹುಂಡಿ ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳಲ್ಲಿ ಮೂವರು ಹಿಂದೆ ದೇವಾಲಯಗಳ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದರು.


ಸಂಬಂಧಿತ ಟ್ಯಾಗ್ಗಳು

Temple Arrest Theft Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ