ಯುವಕರಲ್ಲಿ ಮೂಲಭೂತವಾದ ಹರಡುವುದನ್ನು ನಿಲ್ಲಿಸಿ: ಪ್ರಧಾನಿ ಮೋದಿ

PM Narendra Modi at sco summit

14-06-2019

ಕಿರ್ಜಿಸ್ತಾನ್: ಸಾಹಿತ್ಯ ಮತ್ತು ಸಂಸ್ಕೃತಿಗಳು ನಮ್ಮ ಸಮಾಜಗಳಲ್ಲಿ ಸಕಾರಾತ್ಮಕ ಕಾರ್ಯಗಳಿಗೆ ಅವಕಾಶ ನೀಡಿವೆ. ಮೂಲಭೂತವಾದವನ್ನು ಯುವಕರಲ್ಲಿ ಹರಡುವುದನ್ನು ನಿಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಅಲ್ಲದೇ, ನಾನು ಶ್ರೀಲಂಕಾ ಭೇಟಿ ವೇಳೆ, ಅಮಾಯಕರನ್ನು ಬಲಿಪಡೆದ ಭಯೋತ್ಪಾದನೆಯ ಕರಾಳ ಮುಖವನ್ನು ತೋರಿಸಿದ ಸೇಂಟ್ ಆಂಥೋಣಿ ಚರ್ಚ್‍ಗೆ ಭೇಟಿ ನೀಡಿದೆ ಎಂದರು.

ಭಯೋತ್ಪಾದನೆಯ ಅಪಾಯವನ್ನು ನಿರ್ವಹಿಸಲು, ಎಲ್ಲ ಮಾನವೀಯ ಶಕ್ತಿಗಳು ಒಗ್ಗಟ್ಟಾಗಬೇಕು. ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ, ಬೆಂಬಲಿಸುವ ಮತ್ತು ಹಣವನ್ನು ನೀಡುವ ದೇಶಗಳನ್ನು ಜವಾಬ್ದಾರರನ್ನಾಗಿಸಬೇಕು ಎಂದು ಅವರು ಸಲಹೆ ನೀಡಿದರು. 

ಶಾಂಘೈ ಸಹಕಾರ ಸಂಘಟನೆ ಶೃಂಗ (ಎಸ್‍ಸಿಒ) ಸಭೆಯಲ್ಲಿ ಭಾಗವಹಿಸಿ ಸಭೆಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಎಸ್‍ಸಿಒ ಶಾಶ್ವತ ಸದಸ್ಯ ರಾಷ್ಟ್ರವಾಗಿ ಇದೀಗ 2 ವರ್ಷಗಳನ್ನು ಪೂರೈಸಿದೆ. ನಾವು ಎಸ್‍ಸಿಒದ ಚಟುವಟಿಕೆಗಳಿಗೆ ಸಕಾರಾತ್ಮಕ ಕೊಡುಗೆಗಳನ್ನು ನೀಡಿದ್ದೇವೆ. ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಸ್‍ಸಿಒ ಪಾತ್ರ ಮತ್ತು ವಿಶ್ವಾಸಾರ್ಹತೆಗಳನ್ನು ವೃದ್ಧಿಸಿದ್ದೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

Narendra Modi Kyrgyzstan SCO summit India


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ