ಅಸ್ಸಾಂ ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್: ಓರ್ವನ ಬಂಧನ

Assam Police arrest 2 BJP IT cell members over

14-06-2019

ಗುವಾಹಟಿ: ಅಸ್ಸಾಂ ಸಿಎಂ ಸರ್ವಾನಂದ ಸೊನೋವಾಲ್ ವಿರುದ್ಧ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೆ ಆರೋಪದಡಿ ಬಿಜೆಪಿ ಸಾಮಾಜಿಕ ಜಾಲತಾಣದ ಸದಸ್ಯ ನಿತು ಬೋರಾರನ್ನು ಬಂಧಿಸಲಾಗಿದೆ. ಕೋಮುವಾದಿ ಹೇಳಿಕೆಗಳು ಮತ್ತು ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್‍ಗಳನ್ನು ಆರೋಪಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಸಂಬಂಧ ವಿಚಾರಣೆಗಾಗಿ ರಾಜ್ಯದ ವಿವಿಧೆಡೆಗಳಲ್ಲಿ ಮೂವರನ್ನು ವಿಚಾರಣೆ ನಡೆಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಪೋಸ್ಟ್ ಹಂಚಿಕೊಂಡಿದ್ದ ನಿತು ಬೋರಾ, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ, ವಲಸಿಗ ಮುಸ್ಲಿಮರಿಂದ ಸ್ಥಳೀಯ ಅಸ್ಸಾಮಿಗರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದಿದ್ದರು. ಅಲ್ಲದೇ, ಇದಕ್ಕೆ ಸಿಎಂ ಸರ್ವಾನಂದ ಸೊನೋವಾಲ್ ಅವರೇ ಹೊಣೆ ಎಂದು ಅಭಿಪ್ರಾಯಪಟ್ಟಿದ್ದರು.

ಈ ಸಂಬಂಧ ನಿತುಮೊನಿ ಬೋರಾ ವಿರುದ್ಧ ರಾಜು ಮಹಂತಾ ಎಂಬುವರು ದೂರು ನೀಡಿದ್ದರು. ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಎಫ್‍ಐಆರ್‍ನಲ್ಲಿ ಸಿಎಂ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿರುವುದನ್ನು ದಾಖಲಿಸಲಾಗಿದೆ ಎಂದು ಮೋರಿಗಾಂವ್ ಎಸ್‍ಪಿ ಸ್ವಪ್ನಾನಿಲ್ ದೇಕಾ ಹೇಳಿದ್ದಾರೆ.

ಸ್ಥಳೀಯ ಅಸ್ಸಾಮಿಗರ ರಕ್ಷಣೆಯ ಹೊಣೆ ಸಿಎಂ ಅವರದು. ಇದರಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಆದ್ದರಿಂದ ಜಲುಕ್‍ಬರಿ ಶಾಸಕ ಹಿಮಂತ ಬಿಸ್ವಾ ಶರ್ಮಾ ಅವರು ನೂತನ ಗೃಹಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಕೂಡ ಅವರು ಪೋಸ್ಟ್ ನಲ್ಲಿ ಅಭಿಪ್ರಾಯಪಟ್ಟಿದ್ದರು.


ಸಂಬಂಧಿತ ಟ್ಯಾಗ್ಗಳು

Assam Arrest Social Media BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ