ಕರ್ನಾಟಕದ ರೈತರಿಗೆ ತಮಿಳುನಾಡು ಪೊಲೀಸರಿಂದ ಕಿರುಕುಳ !

Kannada News

09-06-2017

ಅಕ್ರಮ ಹಸು ಸಾಗಣೆ ಆರೋಪದಡಿ ತಮಿಳು ನಾಡಿನ ಪೊಲೀಸರು ಕರ್ನಾಟಕದ  ರೈತರ ಮೇಲೆ ದೌರ್ಜನ್ಯ ಎಸಗುತ್ತಿರುವುದು ಕಂಡುಬಂದಿದೆ. ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ ರೈತರಿಗೆ ತಮಿಳುನಾಡ ಪೊಲೀಸರು ಮತ್ತು ಕೆಲ ಸಂಘಟನೆಗಳ ಕಾರ್ಯಕರ್ತರಿಂದ ನಿರಂತರ ಕಿರುಕುಳ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಕರ್ನಾಟಕದ ರೈತರಿಂದ 27 ಹಸುಗಳನ್ನು ಸಾಗಿಸ್ತಿದ್ದ 2 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಈರೋಡ್ ಸಂತೆಯಿಂದ ಖರೀದಿಸಿದ್ದ ಹಸುಗಳನ್ನು ಸಾಕಲು ಕರ್ನಾಟಕಕ್ಕೆ ತರುತ್ತಿದ್ದರು, ಅವರನ್ನು ಗೋಪಿ ಬಳಿ ನಿನ್ನೆ, ಲಾರಿ ತಡೆದ ತಮಿಳುನಾಡು ಪೊಲೀಸರು ಹಸುಗಳನ್ನು ಮತ್ತು ರೈತರನ್ನು ವಶಕ್ಕೆ ಪಡೆದುಕೊಂಡು. ನಿನ್ನೆಯಿಂದಲೂ ತಿಂಡಿ, ಆಹಾರ ನೀಡದೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ ಮಧ್ಯಾಹ್ನದಿಂದಲೂ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ನೆರವಿಗೆ ಬರಬೇಕೆಂದು ರೈತರು ಮನವಿ ಮಾಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ