ಇಸ್ರೋದಿಂದ ಬಾಹ್ಯಾಕಾಶಕ್ಕೆ ಮಾನವ ಸಹಿತ ಯಾನ ಸಂಕಲ್ಪ

ISRO

13-06-2019

ದೆಹಲಿ: ಜುಲೈ 15, 2019ರಂದು ಚಂದ್ರಯಾನ – 2ಕ್ಕೆ ಚಾಲನೆ ನೀಡಲಾಗುವುದು. ಸೆಪ್ಟಂಬರ್‍ನಲ್ಲಿ ಚಂದ್ರನ ಮೇಲೆ ನೌಕೆ ಇಳಿಯಲಿದೆ. ಇದು ಚಂದ್ರಯಾನ-1ರ ಮುಂದುವರೆ ಭಾಗ ಎಂದು ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದರು.

2022ಕ್ಕೆ 75ನೇ ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಬಾಹ್ಯಾಕಾಶಕ್ಕೆ ಮಾನವ ಸಹಿತ ಯಾನ ನಡೆಸಲು ಇಸ್ರೋ ಸಂಕಲ್ಪ ಮಾಡಿದೆ. 2022ರ ಒಳಗೆ ಇದು ಸಾಧ್ಯವಾಗಬಹುದು. ಇದಕ್ಕಾಗಿ ವಿಶೇಷವಾದ ಘಟಕವನ್ನು ರಚಿಸಲಾಗುವುದು. ಗಗನಯಾನ ರಾಷ್ಟ್ರೀಯ ಸಲಹಾ ಮಂಡಳಿ ಇದರ ಯೋಜನೆ ಮತ್ತು ಕಾರ್ಯಾಚರಣೆಯ ಮೇಲೆ ನಿಗಾ ಇಡಲಿದೆ ಎಂದು ಅವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

ISRO Dr. Jitendra Singh Chandrayana Scientist


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ