ಧರ್ಮಸ್ಥಳದಲ್ಲಿ ಭಾರೀ ಮಳೆ : ಜಲಕ್ಷಾಮ ನಿವಾರಣೆ

Heavy rain in Dharmastala

13-06-2019

ರಾಜ್ಯದ ಕರಾವಳಿ, ದಕ್ಷಿಣ ಕನ್ನಡ, ಮಲೆನಾಡು ಭಾಗಗಳಲ್ಲಿ ಕಳೆದ ಎರಡು-ಮೂರು ದಿನಗಳಿಂದ ಬಿರುಗಾಳಿ ಸಹಿತ ಬಾರಿ ಮಳೆ ಸುರಿಯುತ್ತಿದ್ದು, ನೇತ್ರಾವತಿ ತುಂಬಿ ಹರಿಯುತ್ತಿದ್ದಾಳೆ. ಇದರಿಂದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥನಿಗೂ ತಟ್ಟಿದ್ದ ಜಲಕ್ಷಾಮದ ಆತಂಕ ನಿವಾರಣೆಯಾಗಿದೆ.

ಕಳೆದ ತಿಂಗಳಷ್ಟೇ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆಯವರು, ಶ್ರೀ ಕ್ಷೇತ್ರದಲ್ಲಿ ನೀರಿಗೆ ಅತೀವ ತೊಂದರೆಯಾಗಿದೆ. ಆದ್ದರಿಂದ ದಯವಿಟ್ಟು ಭಕ್ತರು ಕ್ಷೇತ್ರಕ್ಕೆ ಆಗಮಿಸುವುದನ್ನು ಮುಂದೂಡಬೇಕೆಂದು ಮನವಿ ಮಾಡಿಕೊಂಡಿದ್ದರು. ಶ್ರೀ ಕ್ಷೇತ್ರದ ಜಲ ಸಮಸ್ಯೆ ನಿವಾರಣೆಗಾಗಿ ಬಿಬಿಎಂಪಿ ವತಿಯಿಂದ 75,000 ಸಾವಿರ ಲೀಟರ್ ಕುಡಿಯುವ ನೀರನ್ನು ಕಳುಹಿಸಿಕೊಡಲಾಗಿತ್ತು.


ಸಂಬಂಧಿತ ಟ್ಯಾಗ್ಗಳು

Rain Nethravathi Dharmastala River


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ