ಯಶ್ ತಾಯಿ ಪುಷ್ಪಾ ವಿರುದ್ಧ ಎಫ್ ಐ ಆರ್

FIR against Actor Yash Mother Pushpa

13-06-2019

ನಟ ಯಶ್ ಬಾಡಿಗೆ ಮನೆ ಗಲಾಟೆ ಮುಗಿಯೋ ಲಕ್ಷಣಗಳೇ ಕಾಣುತ್ತಿಲ್ಲ. ಕೋರ್ಟ್ ಆದೇಶದಂತೆ ಯಶ್ ಕುಟುಂಬ ಬನಶಂಕರಿ 3 ನೇ ಹಂತದಲ್ಲಿರುವ ಬಾಡಿಗೆ ಮನೆಯನ್ನು ಖಾಲಿ ಮಾಡಿದ ಬಳಿಕ ಯಶ್ ತಾಯಿ ಪುಷ್ಪಾ ವಿರುದ್ಧ ದೂರು ದಾಖಲಾಗಿದೆ.

ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಮನೆಯ ವಸ್ತುಗಳನ್ನು ಹಾನಿ ಮಾಡಲಾಗಿದೆ ಎಂದು ಮನೆ ಮಾಲೀಕರು ಆರೋಪಿಸಿದ್ದರು. ಮನೆಯಲ್ಲಿ ಇದ್ದ ಲೈಟ್, ಬಾಗಿಲು, ಪೂಜಾ ಕೊಠಡಿ, ಫ್ಯಾನ್, ಡೆಕೋರೇಷನ್ ಲ್ಯಾಂಪ್ ಸೇರಿದಂತೆ ಅನೇಕ ವಸ್ತುಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ

ಮಾಲೀಕರಾದ ಡಾ.ವನಜಾ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯಶ್ ತಾಯಿ ವಿರುದ್ಧ ಐಪಿಸಿ ಕಲಂ 427 ಅಡಿ ಕೇಸ್‌ ದಾಖಲಾಗಿದ್ದು, ಎಫ್ ಐ ಆರ್ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Yash FIR Pushpa Complaint


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ