ಅಪಘಾತಗೊಂಡವರ ರಕ್ಷಣೆಗೆ ಹೋದ ಮೂವರ ಸಾವು

Electric Shock death in Mandya

13-06-2019

ಮಂಡ್ಯ: ಅಪಘಾತಕ್ಕೀಡಾದವರನ್ನು ರಕ್ಷಿಸಲು ಹೋದ ಮೂವರಿಗೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯದ ಮದ್ದೂರು ತಾಲೂಕಿನ ಮಣಿಗೆರೆ ಬಳಿ ನಡೆದಿದೆ. ಮಣಿಗೆರೆ ಗ್ರಾಮದ ದೇವರಾಜು(31), ಬಿದರಹೊಸಹಳ್ಳಿ ಗ್ರಾಮದ ಪ್ರಸನ್ನ(45) ಮತ್ತು ಪ್ರದೀಪ್(25) ಮೃತ ದುರ್ದೈವಿಗಳು.
ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದನ್ನು ನೋಡಿದ ಈ ಮೂವರು ವಿದ್ಯುತ್ ಬಗ್ಗೆ ಅರಿವು ಇರದೆ ಸಹಾಯಕ್ಕೆ ಮುಂದಾಗಿದ್ದಾರೆ. ಮಣಿಗೆರೆ ಗ್ರಾಮದ ರವಿ, ಪ್ರಸನ್ನ , ಪುಟ್ಟು ತಕ್ಷಣ ಕಾರಿನಲ್ಲಿ ಇದ್ದವರನ್ನು, ರಕ್ಷಿಸಲು ಮುಂದಾಗಿದ್ದಾರೆ. ಆದರೆ ಆಗ ವಿದ್ಯುತ್ ಕಡಿತಗೊಂಡಿರಲಿಲ್ಲ, ಈ ಮೂವರು ಶಾಕ್ ತಗುಲಿ ಸಾವನ್ನಪ್ಪಿದ್ದಾರೆ.
ಘಟನೆಯಿಂದಾಗಿ ಗ್ರಾಮದಲ್ಲಿ ಮತ್ತಷ್ಟು ಆತಂಕ ಉಂಟಾಗಿತ್ತು. ಭೀಕರ ದೃಶ್ಯದಿಂದ ಕಂಗಾಲಾದ ಜನ ಚೆಸ್ಕಾಂ ಗೆ ಫೋನ್ ಮಾಡಿ ವಿದ್ಯುತ್ ಸಂಪರ್ಕ ಕಡಿತ ಗೊಳಿಸಿದರು. ವಿದ್ಯುತ್ ಸಂಪರ್ಕ ಕಡಿತದ ಬಳಿಕ ಕಾರಿನಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಗ್ರಾಮಸ್ಥರು ಸಹಾಯ ಮಾಡಿದರು. ಕೆ.ಎಂ.‌ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Accident Power Mandya Death


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ