ಐಎಂಎ ವಂಚನೆ: ಮಾಲೀಕ ಮನ್ಸೂರ್ ದುಬೈಗೆ ಪರಾರಿ?

IMA Jewels Cheating case

12-06-2019

ಮನ್ಸೂರ್ ಖಾನ್ ನೇಪಾಳದ ಮೂಲಕ ದುಬೈಗೆ ಪರಾರಿಯಾಗಿರುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಐಎಂಎ ಹಗರಣ ಬೆಳಕಿಗೆ ಬರುತ್ತಿದ್ದಂತೆ, ಸಂಸ್ಥೆಯ ನಾಲ್ವರು ನಿರ್ದೇಶಕರು ಪರಾರಿಯಾಗಿದ್ದಾರೆ. ಮನ್ಸೂರ್ ಪರಾರಿಯಾಗುವ ಮುನ್ನ ನಾಲ್ವರು ನಿರ್ದೇಶಕರು ಹಾಗೂ ಕೆಲ ಆಪ್ತ ಸಿಬ್ಬಂದಿಗಳ ಜೊತೆ ಸಭೆ ನಡೆಸಿ, ಕಾನೂನು ಸಮಸ್ಯೆ ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿರುವುದು ಕಂಡುಬಂದಿದೆ. ಇದನ್ನು ಆಧರಿಸಿ ಮನ್ಸೂರ್ ಖಾನ್ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ಆಪ್ತ ಸಿಬ್ಬಂದಿಯನ್ನು ಪೆÇಲೀಸರು ವಶಕ್ಕೆ ಪಡೆದುಕೊಂಡು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೇಗ್ ಸರಣಿ ಟ್ವೀಟ್

ಐಎಂಎ ವಂಚನೆಯಲ್ಲಿ ತಮ್ಮ ಹೆಸರನ್ನು ತಳುಕು ಹಾಕಿರುವುದಕ್ಕೆ ಮಾಜಿ ಸಚಿವ ರೋಷನ್ ಬೇಗ್ ಅವರು ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಎಂಎ ಮಾಲೀಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹರಿಬಿಟ್ಟಿರುವ ಆಡಿಯೋ ಅನುಮಾನದಿಂದ ಕೂಡಿದೆ. ನಾನು ದೆಹಲಿಯಲ್ಲಿರುವಾಗ ಸಂಚು ರೂಪಿಸಿ ಈ ಕೃತ್ಯ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಂಚನೆ ಪ್ರಕರಣದಲ್ಲಿ ಅಲ್ಪಸಂಖ್ಯಾತ ಮುಖಂಡರೊಬ್ಬರ ಕೈವಾಡವಿದೆ. ಅಲ್ಪಸಂಖ್ಯಾತ ನಾಯಕರಾಗಲು ಹೊರಟಿರುವ ಮುಖಂಡರೊಬ್ಬರು ಈ ಕೃತ್ಯ ನಡೆಸಿದ್ದಾರೆ ಎಂದು ಅವರು ಸಚಿವ ಜಮೀರ್ ಅವರ ಹೆಸರನ್ನು ಪ್ರಸ್ತಾಪಿಸದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

IMA Jewels Dubai Mohamad Mansoor Khan Cheating case


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ