ಬಾಯ್ಲರ್ ಸ್ಟೋಟದಿಂದ ಕಾಖಾ೯ನೆಗೆ ಬೆಂಕಿ ! ವ್ಯಕ್ತಿ ಸಾವು

Kannada News

09-06-2017

ಬೀದರ್:- ಬಾಯ್ಲರ್ ಸ್ಟೋಟದಿಂದಾಗಿ ಕೆಮಿಕಲ್ ಕಾಖಾ೯ನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾಖಾ೯ನೆಯಲ್ಲಿ ಕೆಲಸ ಮಾಡುತ್ತಿದ್ದ ಕಾಮಿ೯ಕ ಸಾವನ್ನಪ್ಪಿದ ಧಾರುಣ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್‌ ಪಟ್ಟಣದ ಆರ್.ಟಿ.ಓ ಚಕ್ ಪೊಸ್ಟ್ ಬಳಿ ನಡೆದಿದೆ. ಹೈದ್ರಾಬಾದ್ ಮೂಲದ 38 ವಷ೯ದ ವೆಂಕಟೇಶ ಬೆಂಕಿ ಹತ್ತಿಕೊಂಡದ್ದರಿಂದ ಕಾಖಾ೯ನೆ‌ ಒಳಗಡೆ ಸಾವನ್ನಪ್ಪಿದ್ದಾನೆ. ಆರ್.ಕೆ ಆಗಾ೯ನಿಕ್ ಕೆಮಿಕಲ್ ಖಾಕಾ೯ನೆ ಬಾಯ್ಲರ್ ಸ್ಫೋಟದಿಂದ ಕಾಖಾ೯ನೆಗೆ ಬೆಂಕಿ ತಗುಲಿದ್ದು ೩ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿವೆ. ವಿಷಯ ತಿಳಿಯುತ್ತಿದ್ದಂತೆ ಹುಮ್ನಾಬಾದ್ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ