ರಾತ್ರಿ ವೇಳೆ ಲೈಟ್ ಹಾಕಿ ಮಲಗಿದರೆ ಏನಾಗುತ್ತೆ ಗೊತ್ತ?

Sleeping with lights on linked to weight gain in women

12-06-2019

ಹಲವರಿಗೆ ರಾತ್ರಿ ವೇಳೆ ಬೆಳಕಿನಲ್ಲಿ ಮಲಗುವ ರೂಢಿ ಇರುತ್ತದೆ. ಕೃತಕವಾಗಿರುವ ಮಂದ ಬೆಳಕು ಅಥವಾ ಗಾಢ ಬೆಳಕು ಅಥವಾ ಟಿವಿ ಬೆಳಕಿನಲ್ಲಿ ಮಲಗುತ್ತಾರೆ. ಆದರೆ ಹಾಗೆ ಮಲಗುವುದು ಆರೋಗ್ಯಕ್ಕೆ ಹಾನಿಕರ ಎನ್ನುವುದು ಹೊಸ ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ಅಮೆರಿಕದ ಜಾಮಾ ಇಂಟರ್ನಲ್ ಮೆಡಿಸಿನ್ ಜರ್ನಲ್ ನಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿ ಪ್ರಕಾರ ಹೀಗೆ ಕೃತಕ ಬೆಳಕಿನಲ್ಲಿ ರಾತ್ರಿ ವೇಳೆ ಮಲಗುವ ಮಹಿಳೆಯರಲ್ಲಿ ಒಬೆಸಿಟಿ ಅಥವಾ ಸ್ಥೂಲಕಾಯ ಉಂಟಾಗುವ ಸಾಧ್ಯತೆಗಳಿವೆ. ರಾತ್ರಿ ವೇಳೆ ಕೃತಕ ಬೆಳಕಿನಲ್ಲಿ ಮಲಗುವುದರಿಂದ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾರ್ಮೋನು ವ್ಯತ್ಯಾಸವಾಗುತ್ತದೆ. ಅದರಲ್ಲೂ ನಿದ್ರೆಗೆ ಸಂಬಂಧಿಸಿದ ಹಾರ್ಮೋನುಗಳು ವ್ಯತ್ಯಾಸವಾಗುವುದರಿಂದ ತೂಕ ಹೆಚ್ಚಳದ ಸಮಸ್ಯೆ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಈ ಅಧ್ಯಯನದಲ್ಲಿ 35 ರಿಂದ 74 ವರ್ಷ ವಯಸ್ಸಿನ 43 ಸಾವಿರ ಮಹಿಳೆಯರು ಭಾಗವಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sleep Weight gain Health Women


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ